ಕೊರೊನಾ ರೂಪಾಂತರಿ ಓಮಿಕ್ರಾನ್ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದು, ಸದ್ಯ ಇದು ಇಡೀ ಜಗತ್ತನ್ನೇ ಆವರಿಸುತ್ತಿದೆ. ಆದರೆ, ಆ ದೇಶದಲ್ಲಿ ಮಾತ್ರ ಇದರ ಹಾವಳಿ ಏಕಾಏಕಿ ಕುಸಿಯುತ್ತ ಸಾಗುತ್ತಿದೆ.
ಸಮಾಧಾನಕರ ಸಂಗತಿ ಎಂದರೆ ಅಲ್ಲಿ ಓಮಿಕ್ರಾನ್ ಯಾವುದೇ ತೊಂದರೆ ಹಾಗೂ ಅವಾಂತರಗಳನ್ನು ಸೃಷ್ಟಿ ಮಾಡದೆ ತನ್ನ ಆಟ ಕೊನೆಗೊಳಿಸುತ್ತಿದೆ ಎಂದು ತಜ್ಞರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಆರಂಭದಲ್ಲಿ ಏರುತ್ತ ಸಾಗಿದ್ದ ಓಮಿಕ್ರಾನ್ ಪ್ರಕರಣಗಳು ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಕಡಿಮೆಯಾಗುತ್ತ ಸಾಗುತ್ತಿದೆ. ಅಲ್ಲಿ ಕಳೆದ ವಾರ ಪ್ರತಿ ದಿನ 20 ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದರು. ಆದರೆ, ಈ ವಾರ ತೀರಾ ಮಟ್ಟದಲ್ಲಿ ಇಳಿಕೆಯಾಗುತ್ತಿದ್ದು, ಅಲ್ಲಿನ ಪ್ರಮುಖ ಹಾಗೂ ದೊಡ್ಡ ನಗರಗಳಲ್ಲಿ ಇದರ ಹಾವಳಿ ಏಕಾಏಕಿ ಕ್ಷೀಣಿಸುತ್ತಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಾಕಿಂಗ್: ಸ್ನೇಹಿತರಿಂದಲೇ 14 ವರ್ಷದ ಬಾಲಕನ ಹತ್ಯೆ
ಆರಂಭದಲ್ಲಿ ಓಮಿಕ್ರಾನ್ ಪತ್ತೆಯಾಗುತ್ತಿದ್ದಂತೆ ಸಹಜವಾಗಿ ದಕ್ಷಿಣ ಆಫ್ರಿಕಾ ಭಯದ ವಾತಾವರಣದಲ್ಲಿತ್ತು. ಅಲ್ಲದೇ, ನೆರೆಹೊರೆಯ ರಾಷ್ಟ್ರಗಳು ಕೂಡ ದಕ್ಷಿಣ ಆಫ್ರಿಕಾದ ಮೇಲೆ ನಿರ್ಬಂಧ ಹೇರಲು ಆರಂಭಿಸಿದ್ದವು. ಇದರಿಂದ ದಕ್ಷಿಣ ಆಫ್ರಿಕಾ ಕೊಂಚ ವಿಚಲಿತವಾದಂತೆ ಕಂಡು ಬಂದಿತ್ತಾದರೂ ಈಗ ನಿಟ್ಟುಸಿರು ಬಿಡುತ್ತಿದೆ. ಅಲ್ಲದೇ, ದಕ್ಷಿಣ ಆಫ್ರಿಕಾದಲ್ಲಿನ ಸದ್ಯದ ಪರಿಸ್ಥಿತಿ ನೋಡಿದರೆ, ಓಮಿಕ್ರಾನ್ ವೇಗವಾಗಿ ಹರಡಿ ಅಷ್ಟೇ ವೇಗವಾಗಿ ತನ್ನ ಆಟ ಕೊನೆಗೊಳಿಸುತ್ತದೆ ಎಂಬ ಖಚಿತತೆ ತಜ್ಞರಿಗೆ ಸಿಗುತ್ತಿದೆ.
ಅಲ್ಲದೇ, ಓಮಿಕ್ರಾನ್ ತೀರಾ ದೊಡ್ಡ ಮಟ್ಟದ ಸೋಂಕಿತರನ್ನು ಸೃಷ್ಟಿಸಿದರೂ ಸಾವು – ನೋವುಗಳು ಹಾಗೂ ಆಸ್ಪತ್ರೆಗೆ ದಾಖಲಾದವರ ಸಂಖ್ಯೆಯಲ್ಲಿ ಕೂಡ ತೀರಾ ಕನಿಷ್ಠವಾಗಿತ್ತು. ಹೆಚ್ಚು ಪ್ರಕರಣಗಳು ದಾಖಲಾಗಿದ್ದ, ದಕ್ಷಿಣ ಆಫ್ರಿಕಾದ ದೊಡ್ಡ ಪಟ್ಟಣ ಗೌಟೆಂಗ್ ನಲ್ಲಿ ಕೂಡ ಓಮಿಕ್ರಾನ್ ದೊಡ್ಡ ಪ್ರಮಾಣದಲ್ಲಿ ಕುಸಿತ ಕಂಡಿದೆ. ಹೀಗಾಗಿ ಇಡೀ ಜಗತ್ತು ಕೂಡ ಇಂದು ನಿಟ್ಟುಸಿರು ಬಿಡುವಂತಾಗಿದೆ.