alex Certify ಜಗತ್ತಿನ ಮೊದಲ ಮೊಬೈಲ್ ತಯಾರಿಸಿದ ವ್ಯಕ್ತಿ ಅದನ್ನು ಎಷ್ಟು ಸಮಯ ಬಳಸ್ತಾರೆ ಗೊತ್ತಾ ? ಅವರೇ ಬಾಯ್ಬಿಟ್ಟಿದ್ದಾರೆ ಈ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗತ್ತಿನ ಮೊದಲ ಮೊಬೈಲ್ ತಯಾರಿಸಿದ ವ್ಯಕ್ತಿ ಅದನ್ನು ಎಷ್ಟು ಸಮಯ ಬಳಸ್ತಾರೆ ಗೊತ್ತಾ ? ಅವರೇ ಬಾಯ್ಬಿಟ್ಟಿದ್ದಾರೆ ಈ ಸತ್ಯ

ಒಂದ್ಹೊತ್ತು ಊಟ ಇಲ್ಲದೇ ಇದ್ರೂ ಪರ್ವಾಗಿಲ್ಲ, ಮೊಬೈಲ್‌ ಇಲ್ಲದೇ ಇರಲು ಸಾಧ್ಯವೇ ಇಲ್ಲ ಎಂಬಂಥ ಕಾಲ ಇದು. ಪ್ರತಿ ಕೆಲಸ, ಮನರಂಜನೆ ಎಲ್ಲವೂ ಈಗ ಸ್ಮಾರ್ಟ್‌ಫೋನ್‌ ಅನ್ನೇ ಅವಲಂಬಿಸಿದೆ. ನಾವು ದಿನಪೂರ್ತಿ ಮೊಬೈಲ್‌ ಹಿಡಿದೇ ಇರ್ತೀವಿ, ಆದ್ರೆ ಈ ಸ್ಮಾರ್ಟ್‌ಫೋನ್ ತಯಾರಿಸಿದವರು ಅದನ್ನು ಎಷ್ಟು ಬಳಸುತ್ತಾರೆ ಅನ್ನೋದು ನಿಮಗೆ ಗೊತ್ತಿದ್ಯಾ?

ಸೆಲ್ ಫೋನ್ ಅಥವಾ ಮೊಬೈಲ್ ಫೋನನ್ನು ಕಂಡುಹಿಡಿದವರು ಮಾರ್ಟಿನ್ ಕೂಪರ್. ಒಂದು ದಿನದಲ್ಲಿ ತಾವು ಎಷ್ಟು ಸಮಯ ಮೊಬೈಲ್‌ ಫೋನ್‌ ಬಳಸ್ತೇನೆ ಎಂಬುದನ್ನು ಅವರೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

1973ರಲ್ಲಿ ಮಾರ್ಟಿನ್‌ ಕೂಪರ್‌ ಮೊಬೈಲ್ ಆವಿಷ್ಕರಿಸಿದ್ದರು. ಮಾರ್ಟಿನ್‌ ಕೂಪರ್‌ ಅವರಿಗೆ ಈಗ 93 ವರ್ಷ. ಜಗತ್ತಿನ ಎಲ್ಲಾ ಕಡೆ ಸ್ಮಾರ್ಟ್‌ ಫೋನ್‌ ಹುಚ್ಚು ಹಿಡಿಸಿರೋ ಇವರು ದಿನದ 24 ಗಂಟೆಗಳಲ್ಲಿ ಶೇ.5ಕ್ಕಿಂತಲೂ ಕಡಿಮೆ ಸಮಯವನ್ನು ಮೊಬೈಲ್‌ನಲ್ಲಿ ಕಳೆಯುತ್ತಾರೆ. ಫೋನ್ ಬಳಕೆಯನ್ನು ಕಡಿಮೆ ಮಾಡಿ ವರ್ಚುವಲ್ ಜೀವನವನ್ನು ಬಿಟ್ಟು ವಾಸ್ತವದಲ್ಲಿ ಬದುಕಬೇಕೆಂದು ಎಲ್ಲರಿಗೂ ಸಲಹೆ ನೀಡಿದ್ದಾರೆ.

ಸ್ಮಾರ್ಟ್‌ ಫೋನ್‌ ಹೊರತಾಗಿಯೂ ಪ್ರಪಂಚವಿದೆ ಅನ್ನೋದು ಅವರ ಭಾವನೆ. ಏಪ್ರಿಲ್ 3, 1973 ರಂದು ಮಾರ್ಟಿನ್ ಕೂಪರ್ ಪ್ರಪಂಚದ ಮೊದಲ ಸೆಲ್ ಫೋನ್ ಕರೆಯನ್ನು ಸ್ವೀಕರಿಸಿದರು. ಈ ಮೊಬೈಲ್ ಅನ್ನು ಆವಿಷ್ಕರಿಸಲು ಮಾರ್ಟಿನ್ ಕೇವಲ ಮೂರು ತಿಂಗಳುಗಳನ್ನು ತೆಗೆದುಕೊಂಡರು. ಈ ಫೋನ್ ಹೆಸರು Motorola DynaTAC 8000X . ಇದಕ್ಕಾಗಿ Motorola ಕಂಪನಿ 100 ಮಿಲಿಯನ್ ಡಾಲರ್‌ ಹೂಡಿಕೆ ಮಾಡಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...