ಜಗತ್ತಿನ ಮೊದಲ ಮುದ್ರಿತ ಕ್ರಿಸ್ಮಸ್ ಕಾರ್ಡನ್ನು ಲಂಡನ್ ನ ಚಾರ್ಲ್ಸ್ ಡಿಕನ್ಸ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿದೆ. ಹೆನ್ರಿ ಕೋಲ್ ಇದನ್ನು ವಿನ್ಯಾಸ ಮಾಡಿದ್ದರು. 1843ರಲ್ಲಿ ಈ ಕಾರ್ಡ್ ಅನ್ನು ಮುದ್ರಣ ಮಾಡಲಾಗಿತ್ತು. ಅದೇ ವರ್ಷ ಬ್ರಿಟನ್ ನಲ್ಲಿ ‘A Christmas Carol’ ಕೂಡ ಪ್ರಕಟವಾಗಿತ್ತು.
ಮನೆಯವರೆಲ್ಲ ಕೈಯಲ್ಲಿ ವೈನ್ ಗ್ಲಾಸ್ ಹಿಡಿದು ಒಂದೆಡೆ ಸೇರಿರುವ ಚಿತ್ರ ಈ ಕಾರ್ಡ್ ನಲ್ಲಿದೆ. ‘ಎ ಮೇರಿ ಕ್ರಿಸ್ಮಸ್ & ಹ್ಯಾಪಿ ನ್ಯೂ ಇಯರ್ ಟು ಯು’ ಎಂದು ಬರೆಯಲಾಗಿದೆ. ಒಟ್ಟು 1000 ಕಾರ್ಡ್ ಗಳನ್ನು ಮುದ್ರಿಸಲಾಗಿತ್ತು. ಅವುಗಳ ಪೈಕಿ 21 ಕಾರ್ಡ್ ಗಳು ಮಾತ್ರ ಉಳಿದುಕೊಂಡಿವೆ.
ಅದನ್ನು ಬುಕ್ ಡೀಲರ್ ಒಬ್ಬ ಚಾರ್ಲ್ಸ್ ಡಿಕನ್ಸ್ ಮ್ಯೂಸಿಯಂಗೆ ಕಳಿಸಿಕೊಟ್ಟಿದ್ದ. ಕಾರ್ಡ್ ಮುದ್ರಣವಾದ ವರ್ಷ ಅಂದ್ರೆ 1843ರಲ್ಲಿ ಇದು ಅಷ್ಟೊಂದು ಜನಪ್ರಿಯವಾಗಿರಲಿಲ್ಲ.