ಹಾವುಗಳ ಹೆಸರು ಕೇಳಿದ್ರೆ ಸಾಕು ಎಲ್ಲರಿಗೂ ಭಯ ಸಾಮಾನ್ಯ. ಆದರೂ ಕೆಲವರು ವಿಷಕಾರಿ ಹಾವುಗಳನ್ನೇ ಸಾಕುವ ಅಭ್ಯಾಸ ಮಾಡಿಕೊಂಡಿರ್ತಾರೆ. ಜಗತ್ತಿನ 7 ಅತ್ಯಂತ ವಿಷಕಾರಿ ಹಾವುಗಳು ಯಾವುವು ಅನ್ನೋದನ್ನು ನೋಡೋಣ.
ಕಿಂಗ್ ಕೋಬ್ರಾ – ಇದು ವಿಶ್ವದ ಅತ್ಯಂತ ವಿಷಕಾರಿ ಹಾವು. ದಕ್ಷಿಣ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದ ದೇಶಗಳಲ್ಲಿ ಕಿಂಗ್ ಕೋಬ್ರಾ ಕಂಡುಬರುತ್ತದೆ.
ಕ್ರೈಟ್ – ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಕಂಡುಬರುವ ಕ್ರೈಟ್ ಕೂಡ ಅತ್ಯಂತ ವಿಷಕಾರಿ ಹಾವುಗಳಲ್ಲೊಂದು.
ರಸೆಲ್ಸ್ ವೈಪರ್ – ವಿಷಕಾರಿ ಹಾವುಗಳ ಪಟ್ಟಿಯಲ್ಲಿ ರಸೆಲ್ಸ್ ವೈಪರ್ ಮೂರನೇ ಸ್ಥಾನದಲ್ಲಿದೆ. ಭಾರತ, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಈ ಹಾವುಗಳ ಸಂತತಿಯಿದೆ.
ಸಾ ಸ್ಕೇಲ್ಡ್ ವೈಪರ್ – ಇದು ಕೂಡ ವಿಷಕಾರಿ ಹಾವುಗಳಲ್ಲೊಂದು. ದಕ್ಷಿಣ ಆಫ್ರಿಕಾ, ನೈಋತ್ಯ ಏಷ್ಯಾದ ದೇಶಗಳಲ್ಲಿ ಈ ಹಾವುಗಳು ವಾಸವಾಗಿವೆ.
ಪಿಟ್ ವೈಪರ್ – ಅಪಾಯಕಾರಿ ಹಾವು ಪಿಟ್ ವೈಪರ್, ಪೂರ್ವ ಯುರೋಪ್, ಏಷ್ಯಾ, ಜಪಾನ್‌ನಲ್ಲಿ ಕಂಡುಬರುತ್ತದೆ.
ಬ್ಯಾಂಡೆಡ್ ಕ್ರೈಟ್ – ಭಾರತದಲ್ಲಿ ಹಾವುಗಳ ಸಂತತಿ ಕಡಿಮೆಯೇನಿಲ್ಲ. ಬ್ಯಾಂಡೆಡ್ ಕ್ರೈಟ್ ಎಂಬ ವಿಷಕಾರಿ ಹಾವು ಭಾರತ ಮತ್ತು ಚೀನಾದಲ್ಲಿದೆ.
ಬ್ಯಾಂಬೂ ಪಿಟ್ ವೈಪರ್ – ಈ ಜಾತಿಯ ಹಾವುಗಳು ಕೂಡ ಅತ್ಯಂತ ವಿಷಕಾರಿಯಾಗಿವೆ. ಭಾರತದ ದಕ್ಷಿಣ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಇವು ಕಂಡುಬರುತ್ತವೆ.
ಭಾರತದಲ್ಲಿ ಕಂಡುಬರುವ ಕ್ರೈಟ್ ಎಂಬ ಹಾವು ಬಹಳ ವಿಷಕಾರಿಯಾಗಿದೆ. ಈ ಹಾವು ಕಚ್ಚಿ 45 ನಿಮಿಷಗಳಲ್ಲಿ ಸಾವು ಸಂಭವಿಸುತ್ತದೆ. ವಿಷವು ದೇಹದಲ್ಲಿ ಎಷ್ಟು ವೇಗವಾಗಿ ಹರಡುತ್ತದೆ ಎಂದರೆ, ಹಾವು ಕಚ್ಚಿಸಿಕೊಂಡವರಿಗೆ ನೀರು ಕೇಳಲು ಸಹ ಸಾಧ್ಯವಾಗುವುದಿಲ್ಲ.
ಇದರ ವಿಷವು ನ್ಯೂರೋಟಾಕ್ಸಿನ್‌ಗಳನ್ನು ಹೊಂದಿರುತ್ತದೆ. ಇದರಿಂದಾಗಿ ದೇಹದ ಭಾಗಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಹಾವುಗಳು ಸಾಮಾನ್ಯವಾಗಿ ತಮ್ಮನ್ನು ರಕ್ಷಿಸಿಕೊಳ್ಳಲು ಚಲಿಸುತ್ತವೆ. ಆದರೆ ಅಕಸ್ಮಾತ್ ಯಾರಾದರೂ ಅವುಗಳ ಮೇಲೆ ಕಾಲಿಟ್ಟರೆ ಕಚ್ಚುತ್ತವೆ. ಕ್ರೈಟ್ ಎಂಬ ಹಾವು ಕಚ್ಚಿದ ನಂತರ ದೇಹದಲ್ಲಿ ತುಂಬಾ ಶಾಖ ಉತ್ಪನ್ನವಾಗುತ್ತದೆ. ಅದು ನರಮಂಡಲದ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗಾಗಿ ಬಹಳ ಬೇಗ ಸಾವು ಸಂಭವಿಸುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.