alex Certify ಜಗತ್ತಿನ ಅತ್ಯಂತ ಬೋರಿಂಗ್‌ ವ್ಯಕ್ತಿ ಹಾಗೂ ಕೆಲಸ ಯಾವುದು ಗೊತ್ತಾ….? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗತ್ತಿನ ಅತ್ಯಂತ ಬೋರಿಂಗ್‌ ವ್ಯಕ್ತಿ ಹಾಗೂ ಕೆಲಸ ಯಾವುದು ಗೊತ್ತಾ….? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಜಗತ್ತಿನಲ್ಲಿ ಅತ್ಯಂತ ಬೋರಿಂಗ್‌ ಆಗಿರೋ ವ್ಯಕ್ತಿ ಯಾರು ? ಅತ್ಯಂತ ಬೇಸರ ಮೂಡಿಸಬಲ್ಲ ಐದು ಕೆಲಸಗಳು ಯಾವುವು ಅನ್ನೋ ಇಂಟ್ರೆಸ್ಟಿಂಗ್‌ ವಿಷಯದ ಮೇಲೆ ಅಧ್ಯಯನ ನಡೆದಿದೆ. ಯುಕೆ ಯೂನಿವರ್ಸಿಟಿ ಆಫ್‌ ಎಸ್ಸೆಕ್ಸ್‌ ನ ಸಂಶೋಧಕರು ಜಗತ್ತಿನ ಅತ್ಯಂತ ನೀರಸ ವ್ಯಕ್ತಿಯನ್ನು ಗುರುತಿಸಿದ್ದಾರೆ.

ಆ ವ್ಯಕ್ತಿಯ ಹೆಸರನ್ನು ತಜ್ಞರು ಬಹಿರಂಗಪಡಿಸಿಲ್ಲ. ಆದ್ರೆ ಸಂಶೋಧಕರು ಗುರುತಿಸಿರುವ ಕೆಲವು ಗುಣಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯನ್ನು ನೀರಸ ಎಂದು ಎಲ್ಲರೂ ಬೊಟ್ಟು ಮಾಡಬಹುದು. ವಿಶ್ವದ ಅತ್ಯಂತ ಬೋರಿಂಗ್‌ ವ್ಯಕ್ತಿ ಎಂದರೆ ಡೇಟಾ ವಿಶ್ಲೇಷಕ ಕೆಲಸಗಾರ ಎನ್ನುತ್ತಾರೆ ಸಂಶೋಧಕರು. ಈ ಉದ್ಯೋಗ ಮಾಡುವವರು ಯಾವಾಗಲೂ ಮಲಗಲು ಮತ್ತು ಟಿವಿ ವೀಕ್ಷಿಸಲು ಇಷ್ಟಪಡುತ್ತಾರಂತೆ.

ಬ್ರಿಟನ್‌ನ ಅತ್ಯಂತ ಡಲ್‌ ಉದ್ಯೋಗಗಳ ಬಗ್ಗೆಯೂ ಈ ಅಧ್ಯಯನ ಬೆಳಕು ಚೆಲ್ಲಿದೆ. ಡೇಟಾ, ಅಕೌಂಟೆನ್ಸಿ, ಕ್ಲೀನಿಂಗ್ ಮತ್ತು ಬ್ಯಾಂಕಿಂಗ್  ಅತ್ಯಂತ ಡಲ್‌ ಆಗಿರೋ ವಿಭಾಗಗಳು ಅನ್ನೋ ಅಭಿಪ್ರಾಯಕ್ಕೆ ತಜ್ಞರು ಬಂದಿದ್ದಾರೆ. 500 ಜನರ ಜೀವನಶೈಲಿಯನ್ನು ಅಧ್ಯಯನ ಮಾಡಿದ ಎಸ್ಸೆಕ್ಸ್ ವಿಶ್ವವಿದ್ಯಾಲಯದ ತಂಡವು, ಬೇಸರವು ದೂರದರ್ಶನದ ಮುಂದೆ ಕುಳಿತುಕೊಳ್ಳುವುದು, ಪಕ್ಷಿ ವೀಕ್ಷಣೆ ಮತ್ತು ಧೂಮಪಾನಕ್ಕೂ ಸಂಬಂಧಿಸಿದೆ ಎಂದು ಕಂಡುಹಿಡಿದಿದೆ.

ಜನರು ‘ನೀರಸ’ ಉದ್ಯೋಗ ಮತ್ತು ಹವ್ಯಾಸಗಳನ್ನು ಹೊಂದಿರುವವರಿಂದ ದೂರವಿರಲು ಪ್ರಯತ್ನಿಸುತ್ತಾರೆ, ಇದು ಸಾಮಾಜಿಕ ಬಹಿಷ್ಕಾರಕ್ಕೆ ಕಾರಣವಾಗಬಹುದು ಮತ್ತು ಒಂಟಿತನವನ್ನು ಹೆಚ್ಚಿಸಬಹುದು ಅನ್ನೋದು ತಜ್ಞರ ಅಭಿಮತ. ಅಷ್ಟೇ ಅಲ್ಲ ಇದು ಅವರ ಜೀವನದ ಮೇಲೆ ನಕಾರಾತ್ಮಕ ಪ್ರಭಾವಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ ಸಂಶೋಧಕರು.

ನಮಗೆ ಬೋರಿಂಗ್‌ ಎನಿಸುವ ವ್ಯಕ್ತಿಗಳು ಕಡಿಮೆ ಸಾಮರ್ಥ್ಯ ಹೊಂದಿರುತ್ತಾರೆ, ಆದ್ರೆ ಬೇರೆಯವರ ವಿಚಾರದಲ್ಲಿ ಮೂಗು ತೂರಿಸುವ ಅಭ್ಯಾಸ ಅವರಿಗಿರುವುದಿಲ್ಲ. ಆದರೆ ವಾಸ್ತವದಲ್ಲಿ ವ್ಯಸನ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೊಂದಿರಬಹುದು.

ಅಧ್ಯಯನದ ಪ್ರಕಾರ ಜಗತ್ತಿನಲ್ಲಿ ಅತ್ಯಂತ ಬೋರಿಂಗ್‌ ಆಗಿರುವ 5 ಉದ್ಯೋಗಗಳೆಂದರೆ ಡೇಟಾ ಎನಾಲಿಸಿಸ್‌, ಅಕೌಂಟಿಂಗ್‌, ಟ್ಯಾಕ್ಸ್‌—ಇನ್ಷೂರೆನ್ಸ್‌, ಕ್ಲೀನಿಂಗ್‌ ಮತ್ತು ಬ್ಯಾಂಕಿಂಗ್‌. ಅತ್ಯಂತ ಆಸಕ್ತಿದಾಯಕ ಕೆಲಸಗಳೆಂದ್ರೆ ಕಲಾ ಪ್ರದರ್ಶನ, ವಿಜ್ಞಾನ, ಪತ್ರಿಕೋದ್ಯಮ, ಆರೋಗ್ಯಕ್ಕೆ ಸಂಬಂಧಿಸಿದ ವೃತ್ತಿ, ಮತ್ತು ಬೋಧನೆ. ಅತ್ಯಂತ ಬೋರಿಂಗ್‌ ಹವ್ಯಾಸಗಳೆಂದರೆ ಮಲಗುವುದು, ಧರ್ಮ, ಟಿವಿ ವೀಕ್ಷಣೆ, ಪ್ರಾಣಿಗಳ ವೀಕ್ಷಣೆ ಮತ್ತು ಗಣಿತ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...