ಜಗತ್ತಿನಲ್ಲಿ ಲಕ್ಷಾಂತರ ಬಗೆಯ ಕಾರುಗಳಿವೆ. ನಾನಾ ಬಣ್ಣ, ಫೀಚರ್ಸ್, ಸ್ಪೀಡ್ ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನ. ಹಾಗಿದ್ರೆ ವಿಶ್ವದ ಅತ್ಯಂತ ವೇಗದ ಕಾರು ಯಾವುದು ಅನ್ನೋದು ನಿಮಗೆ ಗೊತ್ತಾ ? ಆ ಕಾರಿನ ಸ್ಪೀಡ್ ಕೇಳಿದ್ರೆ ನೀವು ಅಚ್ಚರಿಪಡೋದ್ರಲ್ಲಿ ಅನುಮಾನವೇ ಇಲ್ಲ. ಕಾರಿನ ಲುಕ್ ಕೂಡ ಅಷ್ಟೇ ಆಕರ್ಷಕವಾಗಿದೆ.
ಬುಗಾಟಿ ಚಿರಾನ್ ಸೂಪರ್ ಸ್ಪೋರ್ಟ್ 300+ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವ ಕಾರು. ಇದು 7993cc, ಕ್ವಾಡ್ ಟರ್ಬೋ ಚಾರ್ಜ್ಡ್, W16, DOHC ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. 7-ಸ್ಪೀಡ್ DSG ಡ್ಯುಯಲ್ ಕ್ಲಚ್ ಅನ್ನು ಅಳವಡಿಸಲಾಗಿದೆ. ಈ ಕಾರಿನ ವೇಗ 490.4847 ಕಿಮೀ. 2019ರಲ್ಲಿ ಈ ಸ್ಪೀಡ್ ತಲುಪುವ ಮೂಲಕ ಬುಗಾಟಿ ಇಡೀ ಜಗತ್ತನ್ನೇ ಅಚ್ಚರಿಗೊಳಿಸಿತ್ತು.
ಆದಾಗ್ಯೂ ಬುಗಾಟ್ಟಿ ತನ್ನ ಸೂಪರ್ ಸ್ಪೋರ್ಟ್ ಕಾರುಗಳಿಗೆ ಮಾತ್ರ ಹೆಸರುವಾಸಿಯಾಗಿದೆ. ಈ ಕಾರಿನ 30 ಘಟಕಗಳನ್ನು ಮಾತ್ರ ಈವರೆಗೆ ಉತ್ಪಾದಿಸಲಾಗಿದೆ ಮತ್ತು ಎಲ್ಲಾ 30 ಘಟಕಗಳನ್ನು ಮಾರಾಟ ಮಾಡಲಾಗಿದೆ.
ಮೊದಲ ನೋಟಕ್ಕೆ ಇಷ್ಟವಾಗುವಷ್ಟು ಆಕರ್ಷಕವಾಗಿದೆ ಇದರ ವಿನ್ಯಾಸ. ಬೆಲೆ ಸುಮಾರು 4 ಮಿಲಿಯನ್ ಡಾಲರ್‌ಗಳಷ್ಟಿದೆ. ಅಂದರೆ ಭಾರತೀಯ ರೂಪಾಯಿಯಲ್ಲಿ 32 ಕೋಟಿ ರೂಪಾಯಿಗಳಿಗಿಂತ ಹೆಚ್ಚು. ಆದರೆ ಭಾರತಕ್ಕೆ ತಂದರೆ ಈ ಕಾರಿಗೆ ಇನ್ನೂ ಹೆಚ್ಚಿನ ವೆಚ್ಚವಾಗುತ್ತದೆ.