ಹಿಂದೂ ಧರ್ಮದ ನಂಬಿಕೆ ಪ್ರಕಾರ ಮೂರ್ತಿ ಛಿದ್ರಗೊಂಡರೆ ಅದನ್ನು ಪೂಜೆ ಮಾಡುವುದಿಲ್ಲ. ನೀರಿನ ಕೆಳಗೆ ಅಥವಾ ಮರದ ಕೆಳಗೆ ಮೂರ್ತಿಯನ್ನು ಇಡುತ್ತಾರೆ. ನಾವು ಮೂರ್ತಿ ಪೂಜೆ ಮಾಡುವುದ್ರಿಂದ ಆ ಮೂರ್ತಿಗೆ ಜೀವ ಬರುತ್ತದೆ. ಆದ್ರೆ ಮೂರ್ತಿ ಛಿದ್ರಗೊಂಡರೆ ಅದ್ರಲ್ಲಿರುವ ಪ್ರಾಣ ಅಂದ್ರೆ ಶಕ್ತಿ ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ. ಆದ್ರೆ ಶಿವಲಿಂಗ ಛಿದ್ರಗೊಂಡರೂ ಅದ್ರ ಪೂಜೆ ಮಾಡಲಾಗುತ್ತದೆ.
ಹಿಂದೂ ಧರ್ಮದಲ್ಲಿ ಛಿದ್ರಗೊಂಡಿರುವ ಮೂರ್ತಿ ಪೂಜೆ ಅಶುಭ. ಭಗವಂತ ಶಿವ ಬ್ರಹ್ಮರೂಪಿ. ಆತನನ್ನು ಯಾವ ರೂಪದಲ್ಲಿ ಬೇಕಾದ್ರೂ ಪೂಜೆ ಮಾಡಬಹುದು. ಶಿವಲಿಂಗದ ಯಾವ ಭಾಗ ಛಿದ್ರಗೊಂಡಿದ್ದರೂ ಅದನ್ನು ಬದಲಾಯಿಸುವ ಅಗತ್ಯವಿಲ್ಲ.
ಶಿವನಿಗೆ ಯಾವುದೇ ಆದಿಯಾಗ್ಲಿ ಅಂತ್ಯವಾಗ್ಲಿ ಇಲ್ಲ. ಶಿವಲಿಂಗವನ್ನು ಶಿವನ ನಿರಾಕಾರ ರೂಪವೆಂದು ಹೇಳಲಾಗುತ್ತದೆ. ಶಿವನ ಮೂರ್ತಿಯನ್ನು ಶಿವನ ಕಾಲ್ಪನಿಕ ರೂಪವೆಂದು ಪರಿಗಣಿಸಲಾಗಿದೆ. ಶಿವನ ನಿರಾಕಾರ ರೂಪಕ್ಕೆ ಪೂಜೆ ಮಾಡಲಾಗುತ್ತೆ. ಶಿವನಿಗೆ ಯಾವುದೇ ನಿರ್ದಿಷ್ಟ ರೂಪ-ಬಣ್ಣವಿಲ್ಲ. ಇದೇ ಕಾರಣಕ್ಕೆ ಶಿವಲಿಂಗ ಛಿದ್ರಗೊಂಡಿದ್ದರೂ ಅದು ಶಕ್ತಿ ಕಳೆದುಕೊಳ್ಳುವುದಿಲ್ಲ.
ಬೇರೆ ದೇವರ ಛಿದ್ರ ಮೂರ್ತಿಗಳನ್ನು ಅಪ್ಪಿತಪ್ಪಿಯೂ ಪೂಜೆ ಮಾಡಬೇಡಿ. ಇದು ಮನೆಯ ದುಃಖಕ್ಕೆ ಕಾರಣವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಇಂಥ ಮೂರ್ತಿಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಛಿದ್ರಗೊಂಡ ಮೂರ್ತಿಯನ್ನು ಭಾನುವಾರ ಅಶ್ವತ್ಥ ಮರದಡಿ ಇಟ್ಟು ಹೊಸ ಮೂರ್ತಿಯನ್ನು ಪೂಜೆ ಮಾಡಬೇಕು.