ಛಲ ಅಂದ್ರೆ ಇದೇ ಅಲ್ವಾ..? ತಂದೆಯ ಅಕಾಲಿಕ ಮರಣದ ನಂತರ ರೆಸ್ಟೋರೆಂಟ್ ಜವಾಬ್ದಾರಿ ಹೊತ್ತ ಯುವ ಸಹೋದರರು..! 05-02-2022 6:40AM IST / No Comments / Posted In: Latest News, India, Live News ಇಡೀ ಕುಟುಂಬದ ಜವಾಬ್ದಾರಿಯನ್ನು ಹೊರುವುದು ದೊಡ್ಡ ವಿಷಯವೇ ಆಗಿದೆ. ಆದರೆ ಅದಕ್ಕಿಂತ ದೊಡ್ಡ ವಿಷಯ ಯಾವುದು ಗೊತ್ತಾ ? ಬಹಳ ಚಿಕ್ಕ ವಯಸ್ಸಿನಲ್ಲಿಯೇ ವಯಸ್ಕರಂತೆ ಅದೇ ರೀತಿಯ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು. ಹೌದು, ತಂದೆಯ ಅಕಾಲಿಕ ಮರಣದ ನಂತರ ಯುವ ಸಹೋದರರು ಫ್ಯಾಮಿಲಿ ರೆಸ್ಟೋರೆಂಟ್‍ನ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 17 ವರ್ಷದ ಜಶನ್‌ದೀಪ್ ಸಿಂಗ್ ಮತ್ತು ಅವರ 11 ವರ್ಷದ ಕಿರಿಯ ಸಹೋದರ ಅಂಶದೀಪ್ ಸಿಂಗ್ ಅವರ ತಂದೆಯ ಹಠಾತ್ ನಿಧನದ ನಂತರ ಅಮೃತಸರದಲ್ಲಿರುವ ತಮ್ಮ ಫ್ಯಾಮಿಲಿ ರೆಸ್ಟೋರೆಂಟ್ ಟಾಪ್ ಗ್ರಿಲ್‌ನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿತ್ತು. ಟ್ವಿಟ್ಟರ್ ಬಳಕೆದಾರ ಅಮರ್ಜಿತ್ ಸಿಂಗ್ ಈ ಕಥೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ಮಕ್ಕಳ ಧೈರ್ಯದ ಕಥೆ ಬೆಳಕಿಗೆ ಬಂದಿದೆ. ಸಹೋದರರು ಪಿಜ್ಜಾ ಮತ್ತು ಸ್ಯಾಂಡ್‌ವಿಚ್‌ಗಳನ್ನು ತಯಾರಿಸುವುದರೊಂದಿಗೆ ವಿಡಿಯೋ ಶುರುವಾಗುತ್ತದೆ. ತಮ್ಮ ತಂದೆ ಮೃತಪಟ್ಟ ನಂತರ 2021ರ ಡಿಸೆಂಬರ್ 26 ರಿಂದ ತಾನು ಮತ್ತು ಅವರ ಕಿರಿಯ ಸಹೋದರ ರೆಸ್ಟೋರೆಂಟ್ ಅನ್ನು ನಿರ್ವಹಿಸುತ್ತಿರುವುದಾಗಿ ಹಿರಿಯ ಸಹೋದರ ಜಶಾಂದೀಪ್ ಹಂಚಿಕೊಂಡಿದ್ದಾರೆ. ಅವರು ಹಣಕಾಸಿನ ತೊಂದರೆಗಳ ಬಗ್ಗೆ ಕೂಡ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ತಂದೆ ಯಾವಾಗಲೂ ಭರವಸೆಯನ್ನು ಕಳೆದುಕೊಳ್ಳಬಾರದು ಮತ್ತು ಹೆಚ್ಚಿನ ಉತ್ಸಾಹದಿಂದ ಕಷ್ಟಗಳನ್ನು ಎದುರಿಸಬಾರದು ಎಂದು ಹೇಳುತ್ತಿದ್ದರು ಎಂಬ ಮಾತನ್ನು ಸಹೋದರರು ನೆನಪು ಮಾಡಿಕೊಂಡಿದ್ದಾರೆ. ಅವರು ಸಿಖ್ ಗುರು ಗೋಬಿಂದ್ ಸಿಂಗ್ ಅವರಿಂದ ಸ್ಪೂರ್ತಿ ಪಡೆದಿರುವುದಾಗಿ ತಿಳಿಸಿದ್ದಾರೆ. ಕೊನೆಯಲ್ಲಿ, ಅವರು ತಮ್ಮ ರೆಸ್ಟೋರೆಂಟ್‌ಗೆ ಬಂದು ಭೇಟಿ ನೀಡುವಂತೆ ಎಲ್ಲರನ್ನು ಆಹ್ವಾನಿಸಿದ್ದಾರೆ. ತಮ್ಮ ರೆಸ್ಟೋರೆಂಟ್ ನಲ್ಲಿ ಸ್ವಚ್ಛ ಮತ್ತು ರುಚಿಕರವಾದ ಆಹಾರವನ್ನು ಕಂಡುಕೊಳ್ಳಬಹುದು ಎಂಬ ಭರವಸೆ ನೀಡಿದ್ದಾರೆ. ಸಹೋದರರಿಬ್ಬರೂ ರೆಸ್ಟೋರೆಂಟ್‌ನಿಂದ 25 ಕಿ.ಮೀ ದೂರದಲ್ಲಿ ವಾಸಿಸುತ್ತಿದ್ದು, ದಿನನಿತ್ಯದ ತಮ್ಮ ಮನೆಯಿಂದ ರೆಸ್ಟೊರೆಂಟ್‌ಗೆ ತೆರಳುತ್ತಾರೆ. ಸಹೋದರರ ಛಲ ಕಂಡ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅವರಿಗೆ ಹಾರೈಕೆಯನ್ನೂ ತಿಳಿಸಿದ್ದಾರೆ. ಅಮೃತಸರ ನಗರದ ಅನೇಕ ಜನರು ತಾವು ಖಂಡಿತವಾಗಿಯೂ ರೆಸ್ಟೋರೆಂಟ್‌ಗೆ ಭೇಟಿ ನೀಡುವುದಾಗಿ ಭರವಸೆ ನೀಡಿದ್ದಾರೆ. loved the courage & their spirit. Give them a go on your next Amritsar trip🙏🙏@rockyandmayur pic.twitter.com/We8RH8z4Rs — amarjit singh (@aj_straightup) February 2, 2022