alex Certify ಛತ್ತೀಸ್ಗಡದ ಈ ಸ್ಥಳಗಳನ್ನು ಕಣ್ತುಂಬಿಕೊಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಛತ್ತೀಸ್ಗಡದ ಈ ಸ್ಥಳಗಳನ್ನು ಕಣ್ತುಂಬಿಕೊಳ್ಳಿ

ಛತ್ತೀಸ್ಗಡ ಪ್ರಾಕೃತಿಕವಾಗಿ ಬಹಳ ಸುಂದರವಾಗಿದೆ. ಇಲ್ಲಿನ ಅನೇಕ ಸ್ಥಳಗಳು ನೈಸರ್ಗಿಕವಾಗಿ ಶ್ರೀಮಂತವಾಗಿವೆ. ಛತ್ತೀಸ್ಗಡಕ್ಕೆ ಪ್ರವಾಸ ಕೈಗೊಳ್ಳುವ ಪ್ಲಾನ್ ಮಾಡಿದ್ದರೆ ಅವಶ್ಯವಾಗಿ ಈ ಸ್ಥಳಗಳನ್ನು ನೋಡಿ ಬನ್ನಿ.

ಚಿತ್ರಕೂಟ್ ಜಲಪಾತ : ಜಗದಲ್ಪುರದ ಬಹುಸುಂದರ ಪ್ರವಾಸಿ ತಾಣ ಚಿತ್ರಕೂಟ್ ಜಲಪಾತ. ಇದನ್ನು ಮಿನಿ ನಯಾಗಾರ ಎಂದೇ ಕರೆಯಲಾಗುತ್ತದೆ. ಇದು 100 ಅಡಿ ಎತ್ತರದಲ್ಲಿದೆ.  ಮಳೆಗಾಲದಲ್ಲಿ ಇದ್ರ ಸೌಂದರ್ಯ ದುಪ್ಪಟ್ಟಾಗುತ್ತದೆ.

ಕಂಕೆರ್ : ಛತ್ತೀಸ್ಗಡದ ಅತ್ಯಂತ ಹಳೆ ನಗರವಿದು. ಇದು ಸುಮಾರು ಒಂದು ಸಾವಿರದಷ್ಟು ಹಳೆಯ ನಗರವಾಗಿದೆ. ಕಾಡುಗಳು, ಜಲಪಾತಗಳು, ಬುಡಕಟ್ಟು ಜನರ ಜೀವನ ಶೈಲಿಯನ್ನು ನೀವಿಲ್ಲಿ ನೋಡಬಹುದಾಗಿದೆ.

ಭೋಮರಾಮದೇವ: ಛತ್ತೀಸ್ಗಡದ ಸುಂದರ ದೇವಸ್ಥಾನಗಳಲ್ಲಿ ಇದೂ ಒಂದು. ಇಲ್ಲಿನ ಕಲೆ, ಶಿಲ್ಪಕಲೆ ಪ್ರವಾಸಿಗರನ್ನು ಸೆಳೆಯುತ್ತದೆ.

ಮನ್ಪುರ್ : ಇದೊಂದು ಆಸಕ್ತಿದಾಯಕ ಸ್ಥಳವಾಗಿದೆ. ಹಿಮಾಚಲ ಪ್ರದೇಶಕ್ಕೆ ನೀವು ಹೋಗಿದ್ದರೆ ಅಲ್ಲಿನ ನೋಟವನ್ನು ಇದು ನೆನಪಿಸುತ್ತದೆ. ಟಿಬೆಟಿಯನ್ ನಿರಾಶ್ರಿತರು ಇಲ್ಲಿ ಕಾಣಸಿಗುತ್ತಾರೆ. ಇದನ್ನು ಛೋಟಾ ಟಿಬೆಟ್ ಎಂದು ಕರೆಯುತ್ತಾರೆ.

ಐತಿಹಾಸಿಕ, ಸಾಂಸ್ಕೃತಿಕ, ಪೌರಾಣಿಕ ಸ್ಥಳಗಳ ಜೊತೆಗೆ ನ್ಯಾಷನಲ್ ಪಾರ್ಕ್ ಕೂಡ ನೋಡಲು ಯೋಗ್ಯವಾಗಿದೆ. ಇಲ್ಲಿ ಹುಲಿ ಅಭಯಾರಣ್ಯವಿದೆ. ಬೇರೆ ಬೇರೆ ವನ್ಯಜೀವಿಗಳನ್ನು ನೀವು ಇಲ್ಲಿ ನೋಡಬಹುದಾಗಿದೆ. ರಾಜ್ಯದಲ್ಲಿ ಮೂರು ರಾಷ್ಟ್ರೀಯ ಉದ್ಯಾನವನ ಹಾಗೂ 11 ವನ್ಯಜೀವಿ ಅಭಯಾರಣ್ಯವಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...