ಬಾಲಿವುಡ್ ನಟ ಸಂಜಯ್ ಕಪೂರ್ ಪುತ್ರಿ ಶನಯಾ ಕಪೂರ್ ತನ್ನ ಚೊಚ್ಚಲ ರ್ಯಾಂಪ್ ವಾಕ್ನಲ್ಲೇ ಭಾರಿ ಟ್ರೋಲ್ ಗೆ ಒಳಗಾಗಿದ್ದಾರೆ.
ಸ್ಟಾರ್-ಸ್ಟಡ್ ಲ್ಯಾಕ್ಮೆ ಫ್ಯಾಶನ್ ಶೋನಲ್ಲಿ ಶನಯಾ ಕಪೂರ್ ತನ್ನ ಚೊಚ್ಚಲ ರಾಂಪ್ ವಾಕ್ ಮಾಡಿದ್ದಾರೆ. ನೀಲಿ, ಕಪ್ಪು ಮತ್ತು ನೇರಳೆ ಬಣ್ಣದ ಮಿನುಗುವ ಉಡುಪು ಧರಿಸಿದ ಶನಯಾ ರ್ಯಾಂಪ್ ವಾಕ್ ಮಾಡಿದ್ದಾರೆ. ತನ್ನ ಚೊಚ್ಚಲ ಬೆಕ್ಕಿನ ನಡಿಗೆಯಲ್ಲೇ ಅವರು ಎಡವಿದ್ದಾರೆ.
ಶನಯಾಳ ಚೊಚ್ಚಲ ರ್ಯಾಂಪ್ ವಾಕ್ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದೆ. ತನ್ನ ಇನ್ಸ್ಟಾಗ್ರಾಂನಲ್ಲಿ ಮನಮೋಹಕ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಆಕೆಯ ಸ್ನೇಹಿತರು, ಅಭಿಮಾನಿಗಳು ಮತ್ತು ಚಿತ್ರರಂಗದವರು ಪೋಸ್ಟ್ಗೆ ಲೈಕ್ಗಳು ಮತ್ತು ಕಾಮೆಂಟ್ಗಳೊಂದಿಗೆ ಪ್ರವಾಹವನ್ನು ಹರಿಬಿಟ್ಟರೆ, ನೆಟ್ಟಿಗರು ಮಾತ್ರ ಆಕೆಯ ರ್ಯಾಂಪ್ ವಾಕ್ ಅನ್ನು ಟ್ರೋಲ್ ಮಾಡಿದ್ದಾರೆ.
ಕೆಲವರು ಇದನ್ನು ಡಕ್ ವಾಕಿಂಗ್ ಎಂದು ಕರೆದ್ರೆ, ಇತರರು ವೃತ್ತಿಪರರಿಂದ ಕಲಿಯುವಂತೆ ಸಲಹೆ ನೀಡಿದ್ದಾರೆ. ಇದು ಇಲ್ಲಿಯವರೆಗಿನ ಅತ್ಯಂತ ಕೆಟ್ಟ ನಡಿಗೆಗೆ ಸಾಕ್ಷಿಯಾಗಿದೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇನ್ನು ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಹಾಗೂ ನಟಿ ಅನನ್ಯಾ ಪಾಂಡೆ ತಮ್ಮ ಸ್ನೇಹಿತೆಯ ರ್ಯಾಂಪ್ ವಾಕ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಜಯ್ ಕಪೂರ್ ಮತ್ತು ಮನೀಶ್ ಮಲ್ಹೋತ್ರಾ ಹೃದಯದ ಎಮೋಜಿಗಳನ್ನು ತುಂಬಿದ್ದಾರೆ. ಸುಝೇನ್ ಖಾನ್ ಅದ್ಭುತ ಗೊಂಬೆ ಎಂದು ಪ್ರತಿಕ್ರಿಯಿಸಿದ್ದಾರೆ.