
ಮಾರಿಗೋಲ್ಡ್ ಎಂದು ಕರೆಯಲ್ಪಡುವ ಚಂಡು ಹೂವು ದುರ್ಗೆಗೆ ಅರ್ಪಿಸುವುದರಿಂದ ಹಿಡಿದು ದಸರಾ, ದೀಪಾವಳಿಯಲ್ಲಿ ಮನೆಯ ಅಲಂಕಾರದವರೆಗೆ ಬಳಕೆಯಾಗುತ್ತದೆ. ಪಾಕಶಾಲೆಯಲ್ಲಿ ಇದರ ಬಳಕೆಯನ್ನು ತಿಳಿಯೋಣ.
ಚೆಂಡು ಹೂ ಪಿತ್ತ ಮತ್ತು ಕಫ ದೋಷವನ್ನು ಸಮತೋಲನ ಮಾಡುತ್ತದೆ. ಇನ್ನು ಸ್ನಾಯುವಿನ ನೋವು ಮತ್ತು ಸಂಧಿವಾತಕ್ಕೆ ಚಿಕಿತ್ಸೆ ನೀಡಲು ಈ ಹೂವಿನ ಎಲೆಯ ಪೇಸ್ಟ್ ಅನ್ನು ನೋವಿನ ಮೇಲೆ ಹಚ್ಚಬೇಕು. ಇದು ಉರಿಯೂತ ನಿವಾರಕವಾಗಿಯೂ ಕೆಲಸ ಮಾಡುತ್ತದೆ. ಅಸ್ತಮಾ ಮತ್ತು ಕೆಮ್ಮಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ.
ಎಲೆಯ ಪೇಸ್ಟ್ ಅನ್ನು ಬೆಣ್ಣೆ ಅಥವಾ ಎಣ್ಣೆಯಲ್ಲಿ ಹುರಿಯಲಾಗುತ್ತದೆ ಮತ್ತು ಮುಟ್ಟಿನ ಅವಧಿಯಲ್ಲಿ ಅಗುವ ಹೆಚ್ಚಿನ ರಕ್ತಸ್ರಾವವನ್ನು ನಿಲ್ಲಿಸಲು ಇದನ್ನು ಸೇವಿಸಲಾಗುತ್ತದೆ.
ಎಲೆಯ ತಾಜಾ ರಸವನ್ನು ಮೂಗಿಗೆ ಬಿಡಲಾಗುತ್ತದೆ. ಉರಿ ಮೂತ್ರ ವಿಸರ್ಜನೆಗೆ ಚಿಕಿತ್ಸೆ ನೀಡಲು ಎಲೆ ಮತ್ತು ಹೂವುಗಳ ದ್ರಾವಣವನ್ನು ಬಳಸಲಾಗುತ್ತದೆ.
ಮೊಡವೆ ಗುಳ್ಳೆಗಳಿಗೆ ಮತ್ತು ಬಿಸಿಲಿನ ಬೇಗೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸುತ್ತಾರೆ.