ಜಾಣ ಮತ್ತು ಚುರುಕಾದ ಮಕ್ಕಳನ್ನು ಪಡೆಯಬೇಕೆಂಬುದು ಬಹುತೇಕ ಎಲ್ಲಾ ಪೋಷಕರ ಬಯಕೆಯಾಗಿರುತ್ತದೆ. ಅದಕ್ಕಾಗಿ ಗರ್ಭಿಣಿಯರು ಈ ಆಹಾರವನ್ನು ಸೇವಿಸಿದರೆ ಅವರ ಬಯಕೆ ಈಡೇರುವುದು ಖಚಿತ.
ಒಮೆಗಾ 3 ಕೊಬ್ಬಿನಾಮ್ಲವು ಭ್ರೂಣದ ಮಗುವಿನ ಬೆಳವಣಿಗೆಗೆ ಬಹಳ ಮುಖ್ಯವಾದ ಅಂಶ. ಅದಕ್ಕಾಗಿ ವಾರಕ್ಕೆರಡು ಬಾರಿಯಾದರೂ ಮೀನು ತಿನ್ನಿ.
ಫೋಲಿಕ್ ಆಸಿಡ್ ಹೇರಳವಾಗಿರುವ ಹಣ್ಣು ತರಕಾರಿಗಳನ್ನು ಸೇವಿಸಿ. ಧಾನ್ಯ ಬೇಳೆಗಳಿಗೂ ನಿಮ್ಮ ಆಹಾರದಲ್ಲಿ ಜಾಗವಿರಲಿ. ಆಂಟಿ ಆಕ್ಸಿಡೆಂಟ್ ಸಾಕಷ್ಟಿರುವ ಬ್ಲೂಬೆರ್ರಿ ಹಣ್ಣು ಸೇವಿಸಿ.
ಬಾದಾಮಿ, ಮೊಸರು, ತುಪ್ಪ, ಬೇಳೆಕಾಳುಗಳು, ಬೀನ್ಸ್ ಗಳಿಗೆ ನಿತ್ಯದ ಮೆನುವಿನಲ್ಲಿ ಜಾಗವಿರಲಿ. ಹಾಲಿನೊಂದಿಗೆ ತಾಜಾ ಹಣ್ಣುಗಳ ರಸ ಸೇವಿಸಿ.