ಚಳಿಗಾಲದಲ್ಲಿ ರುಚಿಕರವಾದ ಬಿಸಿ ಬಿಸಿ ಆಹಾರವನ್ನು ಬಾಯಿ, ಮನಸ್ಸು ಬೇಡುತ್ತೆ. ಹಾಗಂತ ಸಿಕ್ಕಿದ್ದೆಲ್ಲ ತಿಂದ್ರೆ ತಮಗೆ ಕಷ್ಟ.
ಟೀ ಜೊತೆ ಕರಿದ ಬಾದಾಮಿ ತಿನ್ನುವ ರುಚಿಯೇ ಬೇರೆ. ಇಂದು ನಾವು ರೋಸ್ಟೆಡ್ ಬಾದಾಮಿಯನ್ನು ಮನೆಯಲ್ಲಿ ಹೇಗೆ ಮಾಡೋದು ಹೇಳ್ತೇವೆ.
ರೋಸ್ಟೆಡ್ ಬಾದಾಮಿ ಮಾಡಲು ಬೇಕಾಗುವ ಪದಾರ್ಥ:
ಒಂದು ಕಪ್ ಬಾದಾಮಿ
1.4 ಚಮಚ ಉಪ್ಪು
¼ ಚಮಚ ಕರಗಿಸಿದ ಸಕ್ಕರೆ
1 ಚಮಚ ಚಾಟ್ ಮಸಾಲಾ
1 ಚಮಚ ಬೆಳ್ಳುಳ್ಳಿ ಪುಡಿ
1 ಚಮಚ ಈರುಳ್ಳಿ ರಸ
ಕಾಶ್ಮೀರಿ ಕೆಂಪು ಮೆಣಸು
1 ಕಪ್ ಎಣ್ಣೆ
ರೋಸ್ಟೆಡ್ ಬಾದಾಮಿ ಮಾಡುವ ವಿಧಾನ :
ಒಂದು ಬಾಣಲೆ ತೆಗೆದುಕೊಂಡು ಎಣ್ಣೆಯನ್ನು ಬಿಸಿ ಮಾಡಿ. ನಂತ್ರ ಎಣ್ಣೆಗೆ ಬಾದಾಮಿ ಹಾಕಿ ಕರಿಯಿರಿ. ಇನ್ನೊಂದು ಕಡೆ ಎಲ್ಲ ಮಸಾಲೆಯನ್ನು ಚೆನ್ನಾಗಿ ಮಿಕ್ಸ್ ಮಾಡಿ. ಕರಿದ ಬಾದಾಮಿ ಮೇಲೆ ಈ ಮಿಶ್ರಣವನ್ನು ಹಾಕಿ. ಬಾದಾಮಿ ಆರಿದ ಮೇಲೆ ಗಾಳಿ ಹೋಗದ ಡಬ್ಬದಲ್ಲಿ ಇದನ್ನು ಇಡಿ. ಟೀ ಸಮಯದಲ್ಲಿ ರೋಸ್ಟೆಡ್ ಬಾದಾಮಿ ತಿಂದು ಸವಿಯಿರಿ.