alex Certify ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್ ಗೆ ಮತ್ತೊಂದು ಶಾಕ್…! ಪಕ್ಷ ತೊರೆದ ಮತ್ತೊಬ್ಬ ಶಾಸಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್ ಗೆ ಮತ್ತೊಂದು ಶಾಕ್…! ಪಕ್ಷ ತೊರೆದ ಮತ್ತೊಬ್ಬ ಶಾಸಕ

ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ್ಮೇಲೆ ಪಂಜಾಬ್ ನಲ್ಲಿ ಕಾಂಗ್ರೆಸ್ ಗೆ ತನ್ನ ಅಸ್ತಿತ್ವದ ಪ್ರಶ್ನೆ ಶುರುವಾಗಿದೆ. ಈ ವೇಳೆ ಮತ್ತೊಬ್ಬ ಶಾಸಕ ಪಕ್ಷ ತೊರೆದಿದ್ದು, ಮಂಗಳವಾರ ಬಿಜೆಪಿ ಪಕ್ಷ ಸೇರಿದ್ದಾರೆ.

ಪಂಜಾಬ್ ನ ಸದ್ಯದ ಪರಿಸ್ಥಿತಿಗೆ ಕಾಂಗ್ರೆಸ್ ಕಾರಣ ಎಂದು ಆರೋಪಿಸಿರುವ ರಾಣಾ ಗುರ್ಮೀತ್ ಸಿಂಗ್ ಸೋಧಿ ಟ್ವಿಟ್ಟರ್ ನಲ್ಲೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರ ಪೋಸ್ಟ್ ಮಾಡಿದ್ದಾರೆ.

ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕಾಗಿ ಪಂಜಾಬ್ ನ ಭದ್ರತೆ ಹಾಗೂ ಕೋಮು ಸೌಹಾರ್ದತೆಯನ್ನ ಪಣಕ್ಕಿಟ್ಟಿದೆ. ನನ್ನ ರಾಜ್ಯದಲ್ಲಿರುವ ಉಸಿರುಗಟ್ಟಿಸುವ ವಾತಾವರಣ ಹಾಗೂ ಅಸಹಾಯಕತೆಯನ್ನ ಸಹಿಸಲಾಗುತ್ತಿಲ್ಲ. ತೀವ್ರ ದುಃಖ‌ದಿಂದ ಈ ರಾಜೀನಾಮೆ ಪತ್ರ ಬರೆಯುತ್ತಿದ್ದು, ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಎಲ್ಲಾ ಸ್ಥಾನಗಳಿಂದ ಹಿಂದೆ ಸರಿದಿದ್ದೇನೆ ಎಂದು ತಿಳಿಸಿದ್ದಾರೆ.

ಪಂಜಾಬ್ ನ ಹಾಲಿ ಶಾಸಕನಾಗಿರುವ ಸೋಧಿ, ಮಾಜಿ ಸಿಎಂ ಅಮರಿಂದರ್ ಸಿಂಗ್ ಗೆ ಆಪ್ತರಾಗಿದ್ದವರು. ಅಲ್ಲದೆ ಪಂಜಾಬ್ ಕಾಂಗ್ರೆಸ್ ನ ಉಪಾಧ್ಯಕ್ಷರಾಗಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...