alex Certify ಚುನಾವಣೆ ಸಂದರ್ಭದಲ್ಲಿ ಹೊರ ಹೋಗುವಾಗ ಎಷ್ಟು ಹಣ ಇಟ್ಟುಕೊಳ್ಳಬಹುದು ? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚುನಾವಣೆ ಸಂದರ್ಭದಲ್ಲಿ ಹೊರ ಹೋಗುವಾಗ ಎಷ್ಟು ಹಣ ಇಟ್ಟುಕೊಳ್ಳಬಹುದು ? ಇಲ್ಲಿದೆ ಮಾಹಿತಿ

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ ಪ್ರತಿನಿತ್ಯವೂ ಚೆಕ್ ಪೋಸ್ಟ್ ಗಳಲ್ಲಿ ಅಷ್ಟು ಹಣ ಜಪ್ತಿಯಾಗಿದೆ, ಇಷ್ಟು ಹಣ ಜಪ್ತಿಯಾಗಿದೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇದೆ. ಒಂದು ಲಕ್ಷ, ಎರಡು ಲಕ್ಷ ಹಣ ವಶಪಡಿಸಿಕೊಂಡಿರುವ ಘಟನೆಗಳೂ ನಡೆದಿವೆ.

ಆದರೆ ಕೆಲವೊಮ್ಮೆ ಆಸ್ಪತ್ರೆಗೆ ದಾಖಲಾಗಿರುವವರಿಗೆ ಅನಿವಾರ್ಯವಾಗಿ ಹಣ ಬೇಕಾಗುವುದರಿಂದ, ಅಲ್ಲದೆ ವೈಯಕ್ತಿಕ ಕಾರಣಕ್ಕಾಗಿಯೂ, ಲಕ್ಷಗಟ್ಟಲೆ ಹಣ ತೆಗೆದುಕೊಂಡು ಹೋಗುವ ಪರಿಸ್ಥಿತಿ ಉದ್ಭವಿಸಿದ ವೇಳೆ ಈ ಹಣ ಚೆಕ್ ಪೋಸ್ಟ್ ನಲ್ಲಿ ಸಿಕ್ಕಿದರೆ ಸಮಸ್ಯೆ ಎದುರಿಸಬೇಕಾಗುತ್ತದೆ.

ಅಂತಹ ಸಂದರ್ಭದಲ್ಲಿ ಸೂಕ್ತ ದಾಖಲೆ ಅಥವಾ ಮಾಹಿತಿ ನೀಡಿದರೆ ಈ ಪರಿಸ್ಥಿತಿಯಿಂದ ಪಾರಾಗಬಹುದು. ಮೂಲತಃ ವ್ಯಕ್ತಿಯೊಬ್ಬರು 50,000 ನಗದು ಸಾಗಿಸಬಹುದಾಗಿದ್ದು, ಒಂದೊಮ್ಮೆ ಅದಕ್ಕಿಂತ ಜಾಸ್ತಿ ಹಣ ತೆಗೆದುಕೊಂಡು ಹೋಗುವಾಗ ಅದಕ್ಕೆ ಸೂಕ್ತ ದಾಖಲೆಗಳು ಇರಬೇಕಾಗುತ್ತದೆ. ಇನ್ನು ಎರಡು ಲಕ್ಷ ಮೇಲ್ಪಟ್ಟ ವಹಿವಾಟು ಚೆಕ್, ಡಿಡಿ ಅಥವಾ ಆನ್ಲೈನ್ ಮೂಲಕವೇ ನಡೆಸಬೇಕಾಗಿದ್ದು, ಈ ನಿಯಮಗಳು ಈಗಾಗಲೇ ಜಾರಿಯಲ್ಲಿದ್ದರೂ ಸಹ ಚುನಾವಣೆ ಸಂದರ್ಭದಲ್ಲಿ ಇದು ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳುವ ಪರಿಣಾಮ ಮಹತ್ವ ಪಡೆದುಕೊಂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...