
ಚುನಾವಣೆಯಲ್ಲಿ ಪತ್ನಿ ಗೆದ್ದ ಸಂದರ್ಭದಲ್ಲಿ ಆಕೆಯ ಪರವಾಗಿ ಪತಿ ಪರೋಕ್ಷ ಆಡಳಿತ ನಡೆಸುವುದು ಹೊಸ ಸಂಗತಿ ಏನಲ್ಲ. ಇದರ ಮಧ್ಯೆ ಇದು ಈಗ ಮತ್ತೊಂದು ಮಜಲನ್ನು ತಲುಪಿದ್ದು ಚುನಾವಣೆಯಲ್ಲಿ ಗೆದ್ದ ಪತ್ನಿ ಪರವಾಗಿ ಆಕೆಯ ಪತಿ ಪ್ರಮಾಣವಚನ ಸ್ವೀಕರಿಸಿದ್ದಾನೆ.
ಹೌದು, ಮಧ್ಯಪ್ರದೇಶದ ದಾಮೋ ಜಿಲ್ಲೆಯಲ್ಲಿ ಇಂತಹದೊಂದು ವಿಲಕ್ಷಣ ಘಟನೆ ನಡೆದಿದ್ದು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಯ ಮಹಿಳೆ ಸರಪಂಚ್ ಆಗಿ ಆಯ್ಕೆಯಾಗಿದ್ದರು.
ಆದರೆ ಪ್ರಮಾಣವಚನ ಕಾರ್ಯಕ್ರಮದಲ್ಲಿ ತನ್ನ ಪತ್ನಿ ಪರವಾಗಿ ಮಹಿಳೆಯ ಪತಿ ಪ್ರಮಾಣ ವಚನ ಸ್ವೀಕರಿಸಿದ್ದಾನೆ. ಈ ವಿಚಾರ ಈಗ ಬಯಲಾಗುತ್ತಿದ್ದಂತೆಯೇ ಜಿಲ್ಲಾ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.