
ಎಎಪಿ ಅಭ್ಯರ್ಥಿ ಅಜಿತ್ ಪಾಲ್ ಸಿಂಗ್ ಕೊಹ್ಲಿ ವಿರುದ್ಧ ಅಮರಿಂದರ್ ಸಿಂಗ್ ಸೋಲುಂಡಿದ್ದಾರೆ. ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್, ಬಿಜೆಪಿಯ ಡಾ. ಮೋಹನ್ ಸಿಂಗ್ ಬಿಶ್ತ್ ವಿರುದ್ಧ ಸೋತಿದ್ದಾರೆ. ಪಂಜಾಬ್‌ನಲ್ಲಿ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧುಗೆ ಜೀವನ್ ಜ್ಯೋತ್ ಕೌರ್ ಸೋಲಿನ ರುಚಿ ತೋರಿಸಿದ್ದಾರೆ.
ಪಂಜಾಬ್, ಉತ್ತರಾಖಂಡ, ಉತ್ತರ ಪ್ರದೇಶ, ಗೋವಾದಲ್ಲಿ ಬಿಜೆಪಿ ರಣಭೇರಿ ಬಾರಿಸಿದ್ದರೆ, ಪಂಜಾಬ್‌ನಲ್ಲಿ ಎಎಪಿಯ ಬೃಹತ್ ಗೆಲುವನ್ನು ಪಡೆದಿದೆ. ಆದರೆ, ಕಾಂಗ್ರೆಸ್ ಮಾತ್ರ ಹೇಳ ಹೆಸರಿಲ್ಲದಂತೆ ಮಾಯವಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣದ ತುಂಬಾ ರಾಹುಲ್ ಗಾಂಧಿ ಎಲ್ಲಿ ಎಂಬ ಬಗ್ಗೆ ಭಾರಿ ಟ್ರೋಲ್ ಗಳು ಸೃಷ್ಟಿಯಾಗಿವೆ.
ರಾಹುಲ್ ಗಾಂಧಿಯ ವಿಡಿಯೋಗಳನ್ನು ಕೆಣಕುತ್ತಾ, ವಿಧಾನಸಭಾ ಚುನಾವಣಾ ಫಲಿತಾಂಶಗಳ ವೀಕ್ಷಕರು ಕಾಂಗ್ರೆಸ್ಸಿಗರನ್ನು ಮೀಮ್‌ಗಳೊಂದಿಗೆ ಲೇವಡಿ ಮಾಡಿದ್ದಾರೆ. ಹುಡುಗಿಯರು 100ಕ್ಕೆ 94 ಅಂಕಗಳನ್ನು ಪಡೆದಾಗ ಅವರ ಪ್ರತಿಕ್ರಿಯೆ ಹೇಗಿರುತ್ತದೆ ಹಾಗೂ ಹುಡುಗರು 100ಕ್ಕೆ ಪಾಸ್ ಮಾರ್ಕ್ ಪಡೆದಾಗ ಅವರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದಕ್ಕೆ ರಾಹುಲ್ ಗಾಂಧಿ ಅವರ ಫೋಟೋವನ್ನು ಎಡಿಟ್ ಮಾಡಿ ಹಾಕಲಾಗಿದೆ. ಹೀಗೆ ಹಲವಾರು ಫೋಟೋ, ವಿಡಿಯೋಗಳ ಮೆಮೆ ಸೃಷ್ಟಿಯಾಗಿದೆ.
ಇನ್ನು ಗುರುವಾರ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ಅವರು ಜನರ ತೀರ್ಪನ್ನು ವಿನಮ್ರವಾಗಿ ಸ್ವೀಕರಿಸಿದ್ದಾಗಿ ಹೇಳಿದ್ದಾರೆ. ಹಾಗೆಯೇ ಜನಾದೇಶವನ್ನು ಗೆದ್ದವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಭಾರತದ ಜನರ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.
ಸೋಲುಂಡ ಕಾಂಗ್ರೆಸ್, ರಾಹುಲ್ ಗಾಂಧಿಯ ಮೆಮೆಗಳು ಇಲ್ಲಿವೆ……
https://twitter.com/ImAnkitaSharma1/status/1501824191800442883?ref_src=twsrc%5Etfw%7Ctwcamp%5Etweetembed%7Ctwterm%5E1501824191800442883%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Frahul-gandhi-trolled-with-memes-after-congresss-dreadful-run-at-assembly-election-2022-4861220.html