ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಾವು ಈವರೆಗೆ ಪ್ರತಿನಿಧಿಸುತ್ತಿದ್ದ ಶಿಕಾರಿಪುರ ಕ್ಷೇತ್ರವನ್ನು ತಮ್ಮ ಕಿರಿಯ ಪುತ್ರ ವಿಜಯೇಂದ್ರ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಅಲ್ಲದೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿ.ವೈ. ವಿಜಯೇಂದ್ರ ಅವರೇ ಅಭ್ಯರ್ಥಿ ಎಂಬುದಾಗಿ ಘೋಷಿಸಿದ್ದಾರೆ.
ಯಡಿಯೂರಪ್ಪನವರ ಈ ದಿಢೀರ್ ನಿರ್ಧಾರ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆಯಲ್ಲದೆ, ಹಲವು ಚರ್ಚೆಗಳಿಗೂ ಕೂಡ ಆಸ್ಪದ ನೀಡಿದೆ. ಇದರ ಮಧ್ಯೆ ಯಡಿಯೂರಪ್ಪನವರ ಚುನಾವಣಾ ರಾಜಕೀಯ ನಿವೃತ್ತಿ ವಿಷಯ ಅವರ ಆಪ್ತ ಮುಖ್ಯಮಂತ್ರಿಗಳ ಕಾರ್ಯದರ್ಶಿ ರೇಣುಕಾಚಾರ್ಯ ಅವರಿಗೆ ಭಾರಿ ಆಘಾತ ತಂದಿದೆ.
ಸ್ವತಃ ಅವರೇ ಚಿತ್ರದುರ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳ ಮುಂದೆ ಈ ವಿಷಯ ತಿಳಿಸಿದ್ದು, ಯಡಿಯೂರಪ್ಪನವರ ರಾಜಕೀಯ ಇತಿಹಾಸವೇ ರೋಮಾಂಚನವಾದದ್ದು. ಅವರ ಹೇಳಿಕೆ ನನಗೆ ಆಶ್ಚರ್ಯ ಮತ್ತು ಆಘಾತ ಮೂಡಿಸಿದೆ. ಎಲ್ಲೋ ಇದ್ದ ನನ್ನನ್ನು ಗುರುತಿಸಿ ಈ ಮಟ್ಟಿಗೆ ತಂದಿದ್ದೆ ಅವರು ಎಂದು ಹೇಳುವಾಗ ರೇಣುಕಾಚಾರ್ಯ ಗದ್ಗದಿತರಾಗಿದ್ದಾರೆ.