ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ‘ಭಾರತ್ ಜೋಡೋ’ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದರ ಮಧ್ಯೆ ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಸೂರತ್ ಗೆ ತೆರಳಿದ್ದು, ಭಾಷಣದ ಮಧ್ಯೆ ಮುಜುಗರದ ಪರಿಸ್ಥಿತಿ ಎದುರಿಸಿದ್ದಾರೆ.
ಅವರು ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಇದನ್ನು ಗುಜರಾತಿಗೆ ಭಾಷಾಂತರಿಸುತ್ತಿದ್ದ ವ್ಯಕ್ತಿ ರಾಹುಲ್ ಗಾಂಧಿಯವರಿಗೆ ಅರ್ಧದಲ್ಲಿಯೇ ತಡೆದು, ನೀವು ಹಿಂದಿಯಲ್ಲಿ ಮಾತನಾಡಿದರೂ ಇಲ್ಲಿನ ಜನತೆಗೆ ಅರ್ಥವಾಗುತ್ತದೆ ಎಂದಿದ್ದಾರೆ.
ಆಗ ರಾಹುಲ್ ಗಾಂಧಿ ನಡೆಯುತ್ತದಾ ಎಂದು ಪ್ರಚಾರ ಸಭೆಗೆ ಬಂದಿದ್ದ ಸಭಿಕರನ್ನು ಕೇಳಿದ್ದು, ಅವರು ಓಕೆ ಎಂದಿದ್ದಾರೆ. ಆಗ ರಾಹುಲ್ ಗಾಂಧಿ ಭಾಷಾಂತರಕಾರನ ಕಡೆ ತಿರುಗಿ ನಿಮಗೆ ಭಾಷಾಂತರಿಸಲು ಇಷ್ಟವಿಲ್ಲವೇ ? ಸರಿ ಎಂದಿದ್ದಾರೆ. ಆಗ ಭಾಷಾಂತರಕಾರ ವೇದಿಕೆ ಬಿಟ್ಟು ತೆರಳಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.
ಬಿಜೆಪಿ ನಾಯಕರು ಈ ವಿಡಿಯೋವನ್ನು ಹಂಚಿಕೊಂಡು ಭಾಷಾಂತರಕಾರನಿಗೂ ರಾಹುಲ್ ಗಾಂಧಿಯವರ ಭಾಷಣ ಇಷ್ಟವಾಗುತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ.