ಗುಜರಾತ್ ಚುನಾವಣೆ ರಂಗು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಚುನಾವಣೆ ಹತ್ತಿರವಾಗ್ತಾ ಇದ್ದಂತೆ ಅಭ್ಯರ್ಥಿಗಳು ರಣತಂತ್ರ ಹೂಡ್ತಾ ಇದ್ದಾರೆ. ಗೆಲುವಿನ ಲೆಕ್ಕಾಚಾರ ಹಾಕಿರುವ ಬಿಜೆಪಿ ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಮಡದಿ ರಿವಾಬಾ ಜಡೇಜಾಗೆ ತನ್ನ ಪಕ್ಷದಿಂದ ಟಿಕೆಟ್ ನೀಡಲಾಗಿದೆ. ಇದರಿಂದ ಮನೆ ಜಗಳ ಬೀದಿಗೆ ಬಂದಿದೆ.
ಹೌದು, ಅತ್ತಿಗೆ ಬಿಜೆಪಿಯಿಂದ ಕಣಕ್ಕಿಳಿದರೆ, ಜಡೇಜಾ ಅವರ ಸಹೋದರಿ ನೈನಾಬಾ ಕಾಂಗ್ರೆಸ್ ಪ್ರಚಾರಕಿಯಾಗಿ ಕಣಕ್ಕೆ ಇಳಿದಿದ್ದಾರೆ. ಹೀಗಾಗಿ ಅತ್ತಿಗೆ ವರ್ಸಸ್ ನಾದಿನಿಯ ವಾಕ್ಸಮರ ಮುಂದುವರೆದಿದೆ. ತಮ್ಮ ಸ್ವಂತ ಅತ್ತಿಗೆಯ ವಿರುದ್ಧವೇ ಆರೋಪಗಳ ಸುರಿಮಳೆಗೈದಿದ್ದಾರೆ ಜಡೇಜಾ ಸಹೋದರಿ. ರಿವಾಬಾ ಅವರು ಅನುಕಂಪದ ಮತ ಪಡೆಯಲು ಮಕ್ಕಳನ್ನು ಪ್ರಚಾರಕ್ಕೆ ಬಳಸಿಕೊಳ್ತಾ ಇದ್ದಾರೆ ಎಂದು ಹೇಳಿದ್ದಾರೆ.
ಇನ್ನು, ರಾಜ್‌ಕೋಟ್ ಪಶ್ಚಿಮದ ಮತದಾರೆಯಾಗಿದ್ದಾರೆ. ಆದರೆ ಅವರು ಜಾಮ್‌ನಗರ ಉತ್ತರದಿಂದ ಸ್ಪರ್ಧಿಸುತ್ತಿದ್ದಾರೆ. ರಿವಾಬಾ ಅವರು ಚುನಾವಣೆಯಲ್ಲಿ ಸಲ್ಲಿಸಿರುವ ನಾಮಪತ್ರದಲ್ಲಿ ನಿಜವಾದ ಹೆಸರು ರಿವಾ ಸಿಂಗ್ ಹರ್ದೇವ್ ಸಿಂಗ್ ಸೋಲಂಕಿ ಎಂದು ನಮೂದಿಸಿ ರವೀಂದ್ರ ಜಡೇಜಾ ಹೆಸರನ್ನು ಬ್ರಾಕೆಟ್ನಲ್ಲಿ ಬರೆದಿದ್ದಾರೆ. ಇಲ್ಲೇ ಗೊತ್ತಾಗ್ತಾ ಇದೆ ಚುನಾವಣೆಯಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವ ಸಲುವಾಗಿ ಜಡೇಜಾ ಎಂಬ ಉಪನಾಮವನ್ನು ಬಳಸಿದ್ದಾರೆ. ಮದುವೆಯಾಗಿ ಬರೋಬ್ಬರಿ ಆರು ವರ್ಷಗಳು ಕಳೆದಿವೆ. ಆದರೂ ಮತದಾನದ ಪಟ್ಟಿಯಲ್ಲಿ ಹೆಸರು ಬದಲಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.