ಸಂಗಾತಿಯ ಬಗ್ಗೆ ಪ್ರೀತಿಯನ್ನು ವ್ಯಕ್ತಪಡಿಸಲು ಚುಂಬನ ಅತ್ಯುತ್ತಮ ಮಾರ್ಗವಾಗಿದೆ. ಇದು ಪ್ರೇಮಿಗಳು, ದಂಪತಿಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ ಮತ್ತು ಅವರನ್ನು ಮತ್ತಷ್ಟು ಹತ್ತಿರ ತರುತ್ತದೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಚುಂಬಿಸುವಾಗ ಕಣ್ಣುಗಳು ಮುಚ್ಚಿಕೊಳ್ಳುತ್ತವೆ. ಚುಂಬನದ ದೃಶ್ಯದಲ್ಲಿ ನಟ-ನಟಿಯರು ಕೂಡ ಕಣ್ಣು ಮುಚ್ಚಿಕೊಂಡಿರುವುದನ್ನು ನೀವು ಸಿನೆಮಾಗಳಲ್ಲಿ ನೋಡಿರಬಹುದು. ಆದರೆ ಹೀಗ್ಯಾಕೆ ಆಗುತ್ತದೆ? ಇದರ ಹಿಂದಿನ ಕಾರಣವೇನು ಎಂದು ಯೋಚಿಸಿದ್ದೀರಾ?
ಚುಂಬಿಸುವಾಗ ಕಣ್ಣುಗಳು ತಂತಾನೇ ಮುಚ್ಚಿಕೊಳ್ಳುತ್ತವೆ. ಇದಕ್ಕೆ ವೈಜ್ಞಾನಿಕ ಕಾರಣಗಳಿವೆ. ಲಂಡನ್ ವಿಶ್ವವಿದ್ಯಾನಿಲಯದ ರಾಯಲ್ ಹಾಲೋವೇ ಅವರು ಚುಂಬನದ ಸಮಯದಲ್ಲಿ ಕಣ್ಣು ಮುಚ್ಚಿಕೊಳ್ಳುವುದೇಕೆ ಎಂಬ ಬಗ್ಗೆ ಅಧ್ಯಯನವನ್ನು ನಡೆಸಿದ್ದಾರೆ. ಅವರ ಪ್ರಕಾರ ಇದು ‘ಸ್ಪರ್ಶ ಸಂವೇದನೆ’ಯಿಂದಾಗಿ ಸಂಭವಿಸುತ್ತದೆ. ಮನಶ್ಶಾಸ್ತ್ರಜ್ಞರಾದ ಸಾಂಡ್ರಾ ಮರ್ಫಿ ಮತ್ತು ಪೊಲ್ಲಿ ಡಾಲ್ಟನ್ ಕೂಡ ‘ಸ್ಪರ್ಶ ಸಂವೇದನೆ’ ಬಗ್ಗೆ ಹೇಳಿದ್ದಾರೆ. ಸಂಗಾತಿಗಳು ಪರಸ್ಪರ ಹತ್ತಿರ ಬಂದಾಗ ಭಾವನೆಗಳು ಜಾಗೃತಗೊಳ್ಳುತ್ತವೆ. ಪರಸ್ಪರ ಪ್ರಣಯದಲ್ಲಿ ಮುಳುಗಿ ಹೋಗುವುದರಿಂದ ಚುಂಬಿಸುವಾಗ ಕಣ್ಣುಗಳನ್ನು ಮುಚ್ಚುತ್ತಾರೆ.
ಈ ಸಮಯದಲ್ಲಿ ಬೇರೆ ಯಾವುದನ್ನಾದರೂ ಕೇಂದ್ರೀಕರಿಸಲು ಕಷ್ಟವಾಗುತ್ತದೆ, ಆದ್ದರಿಂದ ಕಣ್ಣುಗಳು ಮುಚ್ಚಲ್ಪಡುತ್ತವೆ. ಕಣ್ಣುಗಳು ತೆರೆದಿದ್ದರೆ ಗಮನವು ಹೊರಗಿನ ವಿಷಯಗಳ ಕಡೆಗೆ ಹೋಗುತ್ತದೆ. ಸಂಗಾತಿಗಳು ಚುಂಬನದ ಪೂರ್ಣತೆಯನ್ನು ಅರಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಲಂಡನ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಚುಂಬನದ ವೇಳೆ ಏನನ್ನಾದರೂ ಓದುವ ಕೆಲಸವನ್ನು ನೀಡಲಾಯಿತು. ಆದರೆ ಇದು ಸಾಧ್ಯವಾಗಲಿಲ್ಲ. ಅವರ ಕಣ್ಣುಗಳು ಒಂದೇ ಸಮಯದಲ್ಲಿ ಎರಡು ವಿಷಯಗಳ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಚುಂಬನದ ವೇಳೆ ಕಣ್ಣು ಮುಚ್ಚಿಕೊಳ್ಳುವುದಕ್ಕೆ ‘ಸ್ಪರ್ಶ ಸಂವೇದನೆ’ಕಾರಣ ಎಂಬ ತೀರ್ಮಾನಕ್ಕೆ ವಿಜ್ಞಾನಿಗಳು ಬಂದಿದ್ದಾರೆ.