ಸೋಮವಾರದಂದು 132 ಮಂದಿಯ ಸಾವಿಗೆ ಕಾರಣವಾದ ಚೀನಾ ಈಸ್ಟರ್ನ್ ಏರ್ಲೈನ್ಸ್ ವಿಮಾನಕ್ಕೆ ಸೇರಿದ ಎರಡನೇ ಬ್ಲ್ಯಾಕ್ ಬಾಕ್ಸ್ ಕೂಡ ಪತ್ತೆಯಾಗಿದೆ.
ಶೋಧ ಕಾರ್ಯಾಚರಣೆಯ ನಾಲ್ಕನೇ ದಿನದಂದು ಅಧಿಕಾರಿಗಳು ಬ್ಲ್ಯಾಕ್ ಬಾಕ್ಸ್ ಪತ್ತೆ ಮಾಡಿದ್ದಾರೆ ಎಂದು ವರದಿಯಾಗಿದೆ.
ದುರಂತಕ್ಕೀಡಾದ ವಿಮಾನದಲ್ಲಿ ವಿವಿಧ ದಾಖಲೆಗಳನ್ನು ಪರಿಶೀಲನೆ ಮಾಡಲು ಕಾಕ್ಪಿಟ್ನಲ್ಲಿ ಹಾಗೂ ಟೇಲ್ನಲ್ಲಿ ಎರಡು ಬ್ಲ್ಯಾಕ್ ಬಾಕ್ಸ್ಗಳನ್ನು ಇಡಲಾಗಿತ್ತು. ಈ ಎರಡು ಬಾಕ್ಸ್ಗಳಲ್ಲಿ ಒಂದು ಬುಧವಾರ ಪತ್ತೆ ಮಾಡಲಾಗಿತ್ತು. ಆದರೆ ಇದು ಹಾನಿಗೊಳಗಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಶ್ಲೇಷಣೆಗಾಗಿ ಈ ಸಾಧನವನ್ನು ಬೀಜಿಂಗ್ಗೆ ಕಳುಹಿಸಿಕೊಡಲಾಗಿದೆ.
ವಿಮಾನದ ಬ್ಲ್ಯಾಕ್ ಬಾಕ್ಸ್ಗಳು ಸಾಮಾನ್ಯವಾಗಿ ಪ್ರಕಾಶಮಾನವಾದ ಕಿತ್ತಳೆ ಕೆಂಪು ಬಣ್ಣವನ್ನು ಹೊಂದಿರುತ್ತದೆ. ಹೀಗಾಗಿ ದುರಂತಕ್ಕೀಡಾದ ಸ್ಥಳದಲ್ಲಿ ಇದನ್ನು ಸುಲಭವಾಗಿ ಪತ್ತೆ ಮಾಡಬಹುದು. ಇವುಗಳು ಸ್ಫೋಟಗಳು, ಹೆಚ್ಚಿನ ತಾಪಮಾನ, ನೀರು ಸೇರಿದಂತೆ ಯಾವುದೇ ಹಾನಿಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಇವುಗಳ ಬ್ಯಾಟರಿಗಳು ಸುಮಾರು 30 ದಿನಗಳ ಕಾಲ ಇರುತ್ತದೆ.