ಅಮೆರಿಕದ ಎಲೆಕ್ಟ್ರಿಕಲ್ ವಾಹನ ತಯಾರಿಕಾ ಕಂಪನಿ ಟೆಸ್ಲಾ, ಫೆಬ್ರವರಿ ತಿಂಗಳಲ್ಲಿ 56 ಸಾವಿರಕ್ಕೂ ಅಧಿಕ ಚೀನಾ ನಿರ್ಮಿತ ವಿದ್ಯುತ್ ಚಾಲಿತ ವಾಹನಗಳನ್ನು ಮಾರಾಟ ಮಾಡಿದೆ.
ಒಟ್ಟು 56,515 ಎಲೆಕ್ಟ್ರಿಕಲ್ ವೆಹಿಕಲ್ ಗಳು ಮಾರಾಟವಾಗಿದ್ದು, ಈ ಪೈಕಿ 33,315 ವಾಹನಗಳನ್ನು ಟೆಸ್ಲಾ ಬೇರೆ ದೇಶಗಳಿಗೆ ರಫ್ತು ಮಾಡಿದೆ.
ಚೀನಾ ಪ್ಯಾಸೆಂಜರ್ ಕಾರ್ ಅಸೋಸಿಯೇಶನ್ ಈ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. 2019ರಿಂದ್ಲೂ ಚೀನಾದ ಶಾಂಘೈನಲ್ಲಿ ಟೆಸ್ಲಾ ಕಂಪನಿ, ಮಾಡೆಲ್ 3 ಸೆಡಾನ್ ಗಳು ಹಾಗೂ ಮಾಡೆಲ್ ವೈ ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳನ್ನು ತಯಾರಿಸುತ್ತಿದೆ. ಕಳೆದ ಜನವರಿಯಲ್ಲಿ 59,845 ಚೀನಾ ನಿರ್ಮಿತ ವಾಹಗಳನ್ನು ಮಾರಾಟ ಮಾಡಿದೆ.
ಕಾರುಗಳ ಮಾರಾಟದಲ್ಲಂತೂ ಚೀನಾ ಫೆಬ್ರವರಿ ತಿಂಗಳಲ್ಲಿ ದಾಖಲೆಯನ್ನೇ ಮಾಡಿದೆ. ಒಂದೇ ತಿಂಗಳಲ್ಲಿ ಒಟ್ಟು 1.27 ಮಿಲಿಯನ್ ಕಾರುಗಳು ಸೇಲ್ ಆಗಿವೆ. ಇದು ಕಳೆದ ವರ್ಷಕ್ಕೆ ಹೋಲಿಸಿದ್ರೆ ಶೇ.4.7ರಷ್ಟು ಹೆಚ್ಚಾಗಿದೆ.