ಚೀನಾದಿಂದ ಭಾರತೀಯ ಯುವಕ ಕಿಡ್ನಾಪ್: ಮೌನ ವಹಿಸಿದ ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ 20-01-2022 11:06AM IST / No Comments / Posted In: Latest News, India, Live News ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ 17 ವರ್ಷದ ಯುವಕನನ್ನು ಚೀನಾ ಸೈನಿಕರು ಅಪಹರಣಗೈದ ಬಗ್ಗೆ ಮೌನ ಧೋರಣೆ ತಾಳಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ. ಗಣರಾಜ್ಯೋತ್ಸವ ದಿನಾಚರಣೆಗೂ ಕೆಲವೇ ದಿನಗಳ ಮುಂಚೆ ಭಾರತದ ಭವಿಷ್ಯವಾದ ಯುವಕನನ್ನು ಚೀನಾ ಅಪಹರಿಸಿದೆ. ನಾವು ಎಂದಿಗೂ ಮಿರಾಂ ತರೋನ್ ಕುಟುಂಬದ ಜೊತೆಗೆ ಇದ್ದೇವೆ ಹಾಗೂ ನಾವು ಯಾವುದೇ ಕಾರಣಕ್ಕೂ ಭರವಸೆ ಕಳೆದುಕೊಳ್ಳುವುದಿಲ್ಲ. ನಾವು ಸೋಲನ್ನು ಒಪ್ಪಿಕೊಳ್ಳುವ ಮಾತೇ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮೌನವನ್ನು ನೋಡಿದರೆ ಅವರಿಗೆ ಈ ಪ್ರಕರಣದ ಬಗ್ಗೆ ಯಾವುದೇ ಕಾಳಜಿಯೇ ಇಲ್ಲವೆಂದೆನಿಸುತ್ತೆ ಎಂದು ರಾಹುಲ್ ಗಾಂಧಿ ಟ್ವೀಟಾಯಿಸಿದ್ದಾರೆ . ಚೀನಾ ಪೀಪಲ್ಸ್ ಲಿಬರೇಶನ್ ಆರ್ಮಿಯು ಈಶಾನ್ಯ ರಾಜ್ಯದ ಲುಂಗ್ಟಾ ಜೋರ್ ಪ್ರದೇಶದಿಂದ ಬಾಲಕನನ್ನು ಅಪಹರಿಸಿದೆ ಎಂದು ಸಂಸದ ತಪಿರ್ ಗಾವೊ ಆರೋಪಿಸಿದ ಒಂದು ದಿನದ ನಂತರ ರಾಹುಲ್ ಗಾಂಧಿ ಈ ಪ್ರತಿಕ್ರಿಯೆ ನೀಡಿದ್ದಾರೆ. गणतंत्र दिवस से कुछ दिन पहले भारत के एक भाग्य विधाता का चीन ने अपहरण किया है- हम मीराम तारौन के परिवार के साथ हैं और उम्मीद नहीं छोड़ेंगे, हार नहीं मानेंगे। PM की बुज़दिल चुप्पी ही उनका बयान है- उन्हें फ़र्क़ नहीं पड़ता! — Rahul Gandhi (@RahulGandhi) January 20, 2022 1/2Chinese #PLA has abducted Sh Miram Taron, 17 years of Zido vill. yesterday 18th Jan 2022 from inside Indian territory, Lungta Jor area (China built 3-4 kms road inside India in 2018) under Siyungla area (Bishing village) of Upper Siang dist, Arunachal Pradesh. pic.twitter.com/ecKzGfgjB7 — Tapir Gao (Modi Ka Parivar) (@TapirGao) January 19, 2022