alex Certify ಚಿಪ್ಸ್ ಪ್ಯಾಕ್ ನಲ್ಲಿ ಅಷ್ಟೋಂದು ಗಾಳಿ ಯಾಕಿರುತ್ತೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಪ್ಸ್ ಪ್ಯಾಕ್ ನಲ್ಲಿ ಅಷ್ಟೋಂದು ಗಾಳಿ ಯಾಕಿರುತ್ತೆ ಗೊತ್ತಾ….?

ದುಡ್ಡು ಕೊಟ್ಟು ಚಿಪ್ಸ್ ಪ್ಯಾಕ್ ಖರೀದಿ ಮಾಡ್ತೆವೆ. ಅದ್ರಲ್ಲಿ ಚಿಪ್ಸ್ ಗಿಂತ ಗಾಳಿಯೇ ಜಾಸ್ತಿ ಇರುತ್ತೆ ಅಂತಾ ಚಿಪ್ಸ್ ಖರೀದಿ ಮಾಡಿದವರು ಆರೋಪ ಮಾಡೋದು ಮಾಮೂಲಿ. ಸಾಮಾನ್ಯವಾಗಿ ಎಲ್ಲ ಚಿಪ್ಸ್ ಪ್ಯಾಕ್ ನಲ್ಲಿಯೂ ಗಾಳಿ ತುಂಬಿರುತ್ತದೆ. ಬಹುತೇಕರು ಚಿಪ್ಸ್ ಪ್ಯಾಕ್ ನಲ್ಲಿ ಆಮ್ಲಜನಕವಿರುತ್ತದೆ ಎಂದು ನಂಬಿದ್ದಾರೆ. ಆದ್ರೆ ಚಿಪ್ಸ್ ಪ್ಯಾಕ್ ನಲ್ಲಿರುವುದು ಸಾರಜನಕ.

ಉದ್ದೇಶ ಪೂರ್ವಕವಾಗಿ ಚಿಪ್ಸ್ ಪ್ಯಾಕ್ ಗೆ ಸಾರಜನಕ ತುಂಬಲಾಗಿರುತ್ತದೆ. ಇದಕ್ಕೆ ಮೂರು ಬಹುಮುಖ್ಯ ಕಾರಣಗಳಿರುತ್ತವೆ. ಚಿಪ್ಸ್ ಮುರಿಯದಂತೆ ರಕ್ಷಿಸಲು ಪ್ಯಾಕ್ ನಲ್ಲಿ ಸಾರಜನಕ ತುಂಬಲಾಗುತ್ತದೆ. ಪ್ಯಾಕೆಟ್ ನಲ್ಲಿ ಬರಿ ಚಿಪ್ಸ್ ಮಾತ್ರವಿದ್ದರೆ ಅಲ್ಲಿ ಇಲ್ಲಿ ಎಸೆದಾಗ ಚಿಪ್ಸ್ ಮುರಿದು ಹಾಳಾಗುತ್ತದೆ.

ಆಮ್ಲಜನಕ ಪ್ರತಿಕ್ರಿಯಾತ್ಮಕ ಅನಿಲವಾಗಿದೆ. ಇದ್ರಿಂದ ಬ್ಯಾಕ್ಟೀರಿಯಾಗಳು ಶೀಘ್ರವಾಗಿ ಬೆಳವಣಿಗೆ ಹೊಂದುತ್ತವೆ. ಇದ್ರಿಂದ ಬಹುಬೇಗ ಚಿಪ್ಸ್ ಹಾಳಾಗುತ್ತದೆ. ಆದ್ರೆ ಸಾರಜನಕ ಕಡಿಮೆ ಪ್ರತಿಕ್ರಿಯಾತ್ಮಕ ಅನಿಲವಾಗಿದೆ. ಇದು ಬ್ಯಾಕ್ಟೀರಿಯಾ ಹಾಗೂ ಸೂಕ್ಷ್ಮಾಣುಗಳನ್ನು ಸುಲಭವಾಗಿ ಬೆಳೆಯಲು ಬಿಡುವುದಿಲ್ಲ.

1994ರ ಅಧ್ಯಯನದ ಪ್ರಕಾರ ಸಾರಜನಕ ಚಿಪ್ಸ್ ಗರಿಗರಿಯಾಗಿರಲು ಸಹಾಯ ಮಾಡುತ್ತದೆಯಂತೆ. ಕ್ರಿಸ್ಪಿ ಚಿಪ್ಸ್ ತಿನ್ನಲು ಜನರು ಇಷ್ಟಪಡ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕಂಪನಿಗಳು ಚಿಪ್ಸ್ ಪ್ಯಾಕ್ ಗೆ ಸಾರಜನಕ ತುಂಬುತ್ತಾರೆ.

ಲೇಸ್ ಪ್ಯಾಕೆಟ್ ನಲ್ಲಿ ಶೇಕಡಾ 85ರಷ್ಟು ಸಾರಜನಕ ತುಂಬಿರುತ್ತದೆ. ಅಂಕಲ್ ಚಿಪ್ಸ್ ನಲ್ಲಿ ಶೇಕಡಾ 75ರಷ್ಟು ಸಾರಜನಕವಿರುತ್ತದೆ. ಬಿಂಗೋದಲ್ಲಿ ಶೇಕಡಾ 75ರಷ್ಟು ಹಾಗೂ ಹಲ್ದಿರಾಮ್ ದಲ್ಲಿ ಶೇಕಡಾ 30ರಷ್ಟು ಮತ್ತು ಕುರ್ಕುರೆಯಲ್ಲಿ ಶೇಕಡಾ 25ರಷ್ಟು ಸಾರಜನಕವಿರುತ್ತದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...