ಖಾಸಗಿ ವಾಹಿನಿ ಕಲರ್ಸ್ ಕನ್ನಡದಲ್ಲಿ ಪ್ರಸಾರಗೊಳ್ಳುತ್ತಿದ್ದ ʼಎದೆ ತುಂಬಿ ಹಾಡುವೆನುʼ ಸೀಸನ್ 1ರ ಚಾಂಪಿಯನ್ ಆಗಿ ಚಿನ್ಮಯ್ ಜೋಶಿ ಹೊರ ಹೊಮ್ಮಿದ್ದಾರೆ.
ಎದೆ ತುಂಬಿ ಹಾಡುವೆನು ಎಂಬ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮವು ಈ ಮೊದಲು ಈ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ನಡೆಸಿಕೊಡುತ್ತಿದ್ದರು.
ಈಗ ಸಂಗೀತಗಾರರಾದ ರಾಜೇಶ್ ಕೃಷ್ಣನ್, ರಘು ದೀಕ್ಷಿತ್, ವಿ. ಹರಿಕೃಷ್ಣ ನಡೆಸಿಕೊಡುತ್ತಿದ್ದು, ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಮಗ ಎಸ್.ಪಿ. ಚರಣ್ ವಿಶೇಷ ಅತಿಥಿಯಾಗಿ ಇದ್ದರು. ಸೀಸನ್ 1ರಲ್ಲಿ ನಾಲ್ಕು ಜನ ಸ್ಪರ್ಧಿಗಳು ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದರು.
ಈ ಪೈಕಿ ಚಿನ್ಮಯ್ ಜೋಶಿ ವಿನ್ನರ್ ಎಂದು ತೀರ್ಪುಗಾರರು ಘೋಷಿಸಿದ್ದು, ಚಿನ್ಮಯ್ 10 ಲಕ್ಷ ರೂಪಾಯಿ ಬಹುಮಾನ ಸ್ವೀಕರಿಸಿದರು. ಎರಡನೇ ಸ್ಥಾನವನ್ನು ಸಂದೇಶ್ ಪಡೆದಿದ್ದು, 5 ಲಕ್ಷ ರೂಪಾಯಿ ಬಹುಮಾನ ಸ್ವೀಕರಿಸಿದ್ದಾರೆ.