alex Certify ಚಿನ್ನವಲ್ಲ……! ಇನ್ಮೇಲೆ ನಿಮಗೆ ಭಾರೀ ಲಾಭ ತಂದುಕೊಡಲಿದೆ ಬೆಳ್ಳಿ, ಕಾರಣ ಗೊತ್ತಾ……? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನವಲ್ಲ……! ಇನ್ಮೇಲೆ ನಿಮಗೆ ಭಾರೀ ಲಾಭ ತಂದುಕೊಡಲಿದೆ ಬೆಳ್ಳಿ, ಕಾರಣ ಗೊತ್ತಾ……?

ಪ್ರಾಚೀನ ಕಾಲದಿಂದಲೂ ಭಾರತೀಯರಿಗೆ ಚಿನ್ನದ ಬಗ್ಗೆ ವ್ಯಾಮೋಹ ಹೆಚ್ಚು. ಜನರು ಬಂಗಾರ ಖರೀದಿಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಚಿನ್ನ ಹೂಡಿಕೆಯ ಅತ್ಯುತ್ತಮ ಸಾಧನ ಎಂಬುದು ಜನರ ನಂಬಿಕೆ. ಬಂಗಾರವಿದ್ದರೆ ಸಮಯ ಬಂದಾಗ ಅದನ್ನು ಬಳಸಿಕೊಳ್ಳಬಹುದು ಅನ್ನೋ ಲೆಕ್ಕಾಚಾರ. ಈ ಕಾರಣಕ್ಕಾಗಿ ಜನರು ಚಿನ್ನದ ಮೇಲೆ ಹೆಚ್ಚು ಹೆಚ್ಚು ಹೂಡಿಕೆ ಮಾಡುತ್ತಾರೆ. ಇದು ನಿಜವಾದರೂ, ತಜ್ಞರ ಪ್ರಕಾರ ಬೆಳ್ಳಿ ಹೆಚ್ಚು ಗಳಿಸುತ್ತದೆ.

ಅಂಕಿ-ಅಂಶಗಳ ಪ್ರಕಾರ ಜನವರಿ 2023 ರಿಂದ ಇಲ್ಲಿಯವರೆಗೆ, ಚಿನ್ನ ಮತ್ತು ಬೆಳ್ಳಿ ಸುಮಾರು 11 ಪ್ರತಿಶತದಷ್ಟು ಲಾಭವನ್ನು ಗಳಿಸಿದೆ. ಇನ್ಮುಂದೆ ಬೆಳ್ಳಿಯ ದರವು ಚಿನ್ನಕ್ಕಿಂತ ಹೆಚ್ಚು ಏರಿಕೆಯಾಗಲಿದೆ. ಬೆಳ್ಳಿ ವ್ಯಾಪಾರಕ್ಕೆ ಬೇಡಿಕೆ ಹೆಚ್ಚಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಇದರೊಂದಿಗೆ ಹೂಡಿಕೆಗೆ ಬೆಳ್ಳಿಯ ಬೇಡಿಕೆ ಹಾಗೆಯೇ ಉಳಿಯಲಿದೆ. ಹೂಡಿಕೆ ಮಾಡಲು ಇಚ್ಛಿಸುವವರು ಬೆಳ್ಳಿಯನ್ನು ಖರೀದಿಸಿ ಇರಿಸಬಹುದು.

ಸದ್ಯ ಬೆಳ್ಳಿ ಕೆಜಿಗೆ 75,000 ರೂಪಾಯಿಯಷ್ಟಿದೆ. ತಜ್ಞರ ಪ್ರಕಾರ, ಮುಂದಿನ 9 ರಿಂದ 12 ತಿಂಗಳೊಳಗೆ ಬೆಳ್ಳಿಯ ಬೆಲೆ ಕೆಜಿಗೆ 85,000 ರೂಪಾಯಿಯಿಂದ  90,000 ರೂಪಾಯಿ ಆಗಲಿದೆ. ಬೆಳ್ಳಿ ಬೆಲೆಯಲ್ಲಿ ಸುಮಾರು 20 ಪ್ರತಿಶತದಷ್ಟು ಏರಿಕೆಯಾಗಬಹುದು. ಪ್ರಸ್ತುತ, ಚಿನ್ನದ ಬೆಲೆ ಮತ್ತು ಬೆಳ್ಳಿಯ ಬೆಲೆಯ ಅನುಪಾತವು ಸುಮಾರು 80 ರಷ್ಟಿದೆ. ಐತಿಹಾಸಿಕವಾಗಿ ಇದು 65 ರಿಂದ 75 ರ ವ್ಯಾಪ್ತಿಯಲ್ಲಿ ಉಳಿದಿದೆ. ಈ ಕಾರಣಕ್ಕಾಗಿ, ಬೆಳ್ಳಿಯ ಬೆಲೆ ಚಿನ್ನಕ್ಕಿಂತ ವೇಗವಾಗಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.

ದೇಶದಲ್ಲಿ ಬಂಗಾರದ ಜತೆಗೆ ಬೆಳ್ಳಿಯ ಬಳಕೆಯೂ ಅತಿ ಹೆಚ್ಚು. ಅದೇ ಸಮಯದಲ್ಲಿ ಭಾರತವು ತನ್ನ ಬೆಳ್ಳಿಯ ಅವಶ್ಯಕತೆಯ ಸುಮಾರು 90 ಪ್ರತಿಶತವನ್ನು ಆಮದು ಮಾಡಿಕೊಳ್ಳುತ್ತದೆ. 2022 ರಲ್ಲಿ ಭಾರತವು ಸುಮಾರು 9,500 ಟನ್ ಬೆಳ್ಳಿಯನ್ನು ಆಮದು ಮಾಡಿಕೊಂಡಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...