ರಕ್ತದ ಗುಂಪಿನ ಬಗ್ಗೆ ನಮಗೆಲ್ಲಾ ಗೊತ್ತಿದೆ. ಪ್ರಪಂಚದಲ್ಲಿ ಸಾಮಾನ್ಯವಾಗಿ 8 ವಿಧದ ರಕ್ತದ ಗುಂಪುಗಳು ಕಂಡುಬರುತ್ತವೆ ಅವುಗಳಲ್ಲಿ A, B, AB ಮತ್ತು O ಸೇರಿವೆ. ಈ ರಕ್ತ ಗುಂಪುಗಳನ್ನು ಧನಾತ್ಮಕ ಮತ್ತು ಋಣಾತ್ಮಕವಾಗಿ ವಿಂಗಡಿಸಬಹುದು. ನಮ್ಮ ದೇಹದಲ್ಲಿ ಆಮ್ಲಜನಕ ಮತ್ತು ಕಾರ್ಬನ್ ಡೈಆಕ್ಸೈಡ್ ಅನ್ನು ಸಾಗಿಸಲು ರಕ್ತವು ಕೆಲಸ ಮಾಡುತ್ತದೆ. ಅವು ಲಗ್‌ಗಳಿಂದ ನಮ್ಮ ದೇಹದ ಉಳಿದ ಭಾಗಗಳಿಗೆ ಆಮ್ಲಜನಕವನ್ನು ಸಾಗಿಸುತ್ತವೆ ಮತ್ತು ದೇಹದ ಉಳಿದ ಭಾಗಗಳಿಂದ ಕಾರ್ಬನ್ ಡೈಆಕ್ಸೈಡ್ ಅನ್ನು ಲಗ್‌ಗಳಿಗೆ ಸಾಗಿಸುತ್ತವೆ.
ಈ ಎಂಟು ರಕ್ತ ಪ್ರಕಾರಗಳ ಹೊರತಾಗಿ ಪ್ರಪಂಚದ ಕೆಲವೇ ಕೆಲವು ಜನರಲ್ಲಿ ಅಪರೂಪದ ರಕ್ತದ ಗುಂಪು ಕಂಡುಬಂದಿದೆ. Rh ಅಂಶವು ಶೂನ್ಯವಾಗಿರುವ ಜನರಲ್ಲಿ ಮಾತ್ರ ಈ ರಕ್ತದ ಗುಂಪು ಕಂಡುಬರುತ್ತದೆ. ಈ ರಕ್ತವು ಪ್ರಪಂಚದಲ್ಲಿ ಕೇವಲ 45 ಜನರ ದೇಹದಲ್ಲಿ ಹರಿಯುತ್ತದೆ.
ಈ ರಕ್ತದ ವಿಶೇಷತೆ ಏನು?
ಗ್ರೀಸ್ ದೇಶದಲ್ಲಿ ಇದನ್ನು ಚಿನ್ನದ ರಕ್ತ ಎಂದೇ ಕರೆಯಲಾಗುತ್ತದೆ. ದೇವರುಗಳ ದೇಹದಲ್ಲಿ ಮಾತ್ರ ಇದು ಹರಿಯುತ್ತದೆ ಎಂದು ನಂಬಲಾಗಿದೆ. ಆದರೆ ಈ ಚಿನ್ನದ ರಕ್ತ ಮಾನವರಿಗೆ ಹಾನಿಕಾರಕ. ಇದನ್ನು ಮೊದಲು 1961ರಲ್ಲಿ ಕಂಡುಹಿಡಿಯಲಾಯಿತು. ಈ ರಕ್ತವು ಉಳಿದ ಸಾಮಾನ್ಯ ರಕ್ತದ ಗುಂಪಿನಿಂದ ಬಹಳ ಭಿನ್ನವಾಗಿದೆ, ಆದ್ದರಿಂದಲೇ ಇದನ್ನು ‘ಗೋಲ್ಡನ್ ಬ್ಲಡ್’ ಎಂದು ಕರೆಯಲಾಗುತ್ತದೆ. ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಉಳಿದ ಗುಂಪಿನವರಿಗೆ ಸುಲಭವಾಗಿ ರಕ್ತ ಲಭ್ಯವಾಗುತ್ತದೆ. ಆದರೆ ಈ ಗೋಲ್ಡನ್ ಬ್ಲಡ್ ಸಿಗುವುದು ಬಹಳ ಕಠಿಣ.
ಈ ಗೋಲ್ಡ್ ಬ್ಲಡ್ ಆನುವಂಶಿಕ ರೂಪಾಂತರದಿಂದ ಉಂಟಾಗುತ್ತದೆ. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಹಾದುಹೋಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. ನಿಕಟ ಸಂಬಂಧದಲ್ಲಿ ಮದುವೆಯಾದರೆ ಜನಿಸುವ ಮಕ್ಕಳು ಈ ಚಿನ್ನದ ರಕ್ತದ ಗುಂಪನ್ನು ಹೊಂದುವ ಸಾಧ್ಯತೆ ಇರುತ್ತದೆ. ಈ ರಕ್ತದ ಗುಂಪಿನ ಜನರು ರಕ್ತಹೀನತೆಯ ಅಪಾಯವನ್ನು ಹೊಂದಿರುತ್ತಾರೆ.