ರಾಜಕೀಯಕ್ಕೂ ಸಿನಿರಂಗಕ್ಕೂ ಅವಿನಾಭಾವ ಸಂಬಂಧ. ಇತ್ತಿಚೆಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಯಾಂಡಲ್ ವುಡ್ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಇದರ ಬೆನ್ನಲ್ಲೇ ಇದೀಗ ಆರೋಗ್ಯ ಸಚಿವ ಡಾ. ಸುಧಾಕರ್ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ʼತನುಜಾʼ ಎಂಬ ಹೆಸರಿನ ಸಿನಿಮಾದಲ್ಲಿ ಡಾ. ಸುಧಾಕರ್ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟಿಸಲು ಪ್ರಮುಖ ಕಾರಣ ಇದು ರಿಯಲ್ ಲೈಫ್ ಸ್ಟೋರಿ. ಕೋವಿಡ್ ಸಂದರ್ಭದಲ್ಲಿ ನೀಟ್ ಪರೀಕ್ಷೆ ಬರೆಯಲು 350 ಕಿ.ಮೀ ದೂರ ಪ್ರಯಾಣಿಸಿ ಗಮನ ಸೆಳೆದಿದ್ದ ಹುಡುಗಿಯ ಕಥೆ.
ಈ ಒನ್ ಲೈನ್ ಸ್ಟೋರಿಯನ್ನೇ ಚಿತ್ರದ ಕಥಾಹಂದರವನ್ನಾಗಿಸಿಕೊಂಡು ನಿರ್ದೇಶಕ ಹರೀಶ್ ಎಂ.ಡಿ. ಹಳ್ಳಿ ಚಿತ್ರವನ್ನು ಮಾಡಿದ್ದಾರೆ. ಈ ಚಿತ್ರದಲ್ಲಿ ಬಿ.ಎಸ್. ಯಡಿಯೂರಪ್ಪ ಕೂಡ ನಟಿಸಿದ್ದು, ಇದೀಗ ಆರೋಗ್ಯ ಸಚಿವ ಸುಧಾಕರ್ ಕೂಡ ಬಣ್ಣ ಹಚ್ಚಿದ್ದಾರೆ.