alex Certify ಚಿಕ್ಕ ವಯಸ್ಸಿನವರಲ್ಲೂ ಕಾಣಿಸಿಕೊಳ್ಳುತ್ತಿರುವ ಹೃದಯಾಘಾತ……! ರಕ್ಷಣೆಗೆ ಬಳಸಿ ಈ ಆರೋಗ್ಯ ಸೂತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಕ್ಕ ವಯಸ್ಸಿನವರಲ್ಲೂ ಕಾಣಿಸಿಕೊಳ್ಳುತ್ತಿರುವ ಹೃದಯಾಘಾತ……! ರಕ್ಷಣೆಗೆ ಬಳಸಿ ಈ ಆರೋಗ್ಯ ಸೂತ್ರ

 

ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನವರಿಗೆ ಹೃದಯಾಘಾತವಾಗ್ತಿದೆ. ಹಿಂದೆ, ಹೃದಯಾಘಾತಕ್ಕೆ ಹೆಚ್ಚುತ್ತಿರುವ ವಯಸ್ಸು ಕಾರಣವಾಗ್ತಿತ್ತು. ಆದ್ರೆ ಈಗ ಹೃದಯಾಘಾತಕ್ಕೆ ಜೀವನ ಶೈಲಿ ಪ್ರಮುಖ ಕಾರಣವಾಗಿದೆ. ಹೃದಯಾಘಾತದಿಂದ ರಕ್ಷಣೆ ಪಡೆಯಲು ಜೀವನಶೈಲಿಯಲ್ಲಿ ಕೆಲ ಬದಲಾವಣೆ ಮಾಡುವ ಅಗತ್ಯವಿದೆ.

ವ್ಯಾಯಾಮ: ಹೃದಯಾಘಾತದಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಮೊದಲ ದಾರಿ ವ್ಯಾಯಾಮ. ಪ್ರತಿ ದಿನ ನಿಯಮಿತ ವ್ಯಾಯಾಮ ಮಾಡುವ ಅಗತ್ಯವಿದೆ. ದಿನಕ್ಕೆ 15 ನಿಮಿಷ ವ್ಯಾಯಾಮ ಮಾಡಿದರೆ ಅಥವಾ ವಾಕ್ ಮಾಡಿದರೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು.

ಕರಿದ ತಿಂಡಿ : ಎಣ್ಣೆಯಲ್ಲಿ ಕರಿದ ಆಹಾರಗಳು ಹೃದಯ ಸಮಸ್ಯೆಗೆ ಕಾರಣವಾಗುತ್ತದೆ. ಉತ್ತಮ ಆರೋಗ್ಯ ಬಯಸುವವರು ಕರಿದ ತಿಂಡಿಯಿಂದ ದೂರವಿರಿ.

ತೂಕ ಇಳಿಕೆ : ತೂಕ ಹೆಚ್ಚಾದಂತೆ ಹೃದಯಾಘಾತದ ಭಯ ಹೆಚ್ಚಿರುತ್ತದೆ. ಹಾಗಾಗಿ ತೂಕ ಏರಲು ಬಿಡಬೇಡಿ.

ಆಹಾರ : ನಮ್ಮ ಆಹಾರ ನಮ್ಮ ಆರೋಗ್ಯದ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಹಾಗಾಗಿ ಉತ್ತಮ ಆಹಾರ ಸೇವನೆಗೆ ಹೆಚ್ಚು ಮಹತ್ವ ನೀಡಿ.

ಡಿಪ್ರೆಶನ್ : ಹೃದಯಾಘಾತಕ್ಕೆ ಪ್ರಮುಖ ಕಾರಣ ಡಿಪ್ರೆಶನ್. ಒತ್ತಡದಿಂದ ದೂರ ಇರಲು ಧ್ಯಾನ ಬಹಳ ಮುಖ್ಯ. ಧ್ಯಾನದಿಂದ ಮನಸ್ಸು ಶಾಂತವಾಗುತ್ತದೆ. ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ.

ರಕ್ತದೊತ್ತಡ : ಹೃದಯಾಘಾತದಿಂದ ದೂರವಿರಲು ಬಯಸುವವರು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಅಧಿಕ ರಕ್ತದೊತ್ತಡ ಅನೇಕ ರೋಗಗಳಿಗೆ ಕಾರಣವಾಗುತ್ತದೆ.

ಮೀನು : ಮೀನಿನಲ್ಲಿ ಒಮೆಗಾ 3 ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಕಣ್ಣಿಗೆ ಮಾತ್ರವಲ್ಲ ಹೃದಯದ ಆರೋಗ್ಯ ಕಾಪಾಡಲು ನೆರವಾಗುತ್ತದೆ.

ಉಪ್ಪಿನ ಕಡಿಮೆ ಬಳಕೆ : ಕಡಿಮೆ ಉಪ್ಪು ಸೇವನೆ ಮಾಡಿ. ಹೆಚ್ಚು ಉಪ್ಪಿನ ಸೇವನೆಯಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಇದು ಆರೋಗ್ಯದ ಏರುಪೇರಿಗೆ ಕಾರಣವಾಗುತ್ತದೆ.

ನಿದ್ರೆ : ಪ್ರತಿಯೊಬ್ಬ ವ್ಯಕ್ತಿಗೂ 7 ಗಂಟೆಗಳ ನಿದ್ರೆಯ ಅವಶ್ಯಕತೆಯಿದೆ. ರಾತ್ರಿ ಬೇಗ ಮಲಗಿ, ಬೆಳಿಗ್ಗೆ ಬೇಗ ಏಳುವುದನ್ನು ರೂಢಿಸಿಕೊಳ್ಳಿ.

ತಂಬಾಕಿನಿಂದ ದೂರವಿರಿ : ತಂಬಾಕು, ಶ್ವಾಸಕೋಶದ ಆರೋಗ್ಯವನ್ನು ಮಾತ್ರವಲ್ಲದೆ ಹೃದಯದ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ತಂಬಾಕು ಸೇವನೆಯಿಂದ ದೂರವಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...