
ರಿಷಭ್ ಪಂತ್, ಟೀಮ್ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್. ಅತ್ಯುತ್ತಮ ವಿಕೆಟ್ ಕೀಪರ್ ಎನಿಸಿಕೊಂಡಿರೋ ಆಟಗಾರ. ಸದ್ಯ ಟೀಂ ಇಂಡಿಯಾದ ಪ್ರಮುಖ ಪ್ಲೇಯರ್‌ಗಳಲ್ಲಿ ರಿಷಭ್ ಕೂಡ ಒಬ್ಬರು. ಅದ್ಭುತ ಬ್ಯಾಟಿಂಗ್ ಮೂಲಕ ಹೆಸರು ಮಾಡಿರೋ ಪಂತ್, ಅಪಾರ ಆಸ್ತಿಯನ್ನೂ ಗಳಿಸಿದ್ದಾರೆ.
ರಿಷಬ್ ಪಂತ್ ಕೇವಲ 24ರ ಹರೆಯದಲ್ಲೇ ಕೋಟ್ಯಂತರ ರೂಪಾಯಿ ಆಸ್ತಿಗೆ ಒಡೆಯ. ಪ್ರಸ್ತುತ ರಿಷಬ್ ಪಂತ್ ಅವರ ಒಟ್ಟಾರೆ ಆಸ್ತಿ ಮೌಲ್ಯ ಸುಮಾರು 66.42 ಕೋಟಿ ರೂಪಾಯಿ. 2021 ರಲ್ಲಿ ಪಂತ್ ಅವರ ನಿವ್ವಳ ಆಸ್ತಿ 5 ಮಿಲಿಯನ್ ಡಾಲರ್‌ನಷ್ಟಿತ್ತು. ಅಂದ್ರೆ ಸುಮಾರು 39 ಕೋಟಿ ರೂಪಾಯಿ.
ಪಂತ್‌ಗೆ ದುಬಾರಿ ಕಾರುಗಳೆಂದರೆ ಬಹಳ ಇಷ್ಟ. ಮರ್ಸಿಡಿಸ್, ಆಡಿ ಎ8 ಮತ್ತು ಫೋರ್ಡ್ ಸೇರಿದಂತೆ ಅನೇಕ ಐಷಾರಾಮಿ ಕಾರುಗಳು ಪಂತ್ ಬಳಿ ಇವೆ. ಇವುಗಳ ಬೆಲೆ ಕ್ರಮವಾಗಿ 2 ಕೋಟಿ, 1.80 ಕೋಟಿ ಮತ್ತು 95 ಲಕ್ಷ ರೂಪಾಯಿ. ರಿಷಬ್ ಪಂತ್ ಉತ್ತರಾಖಂಡದ ಹರಿದ್ವಾರದಲ್ಲಿ ಸುಂದರ ವಿನ್ಯಾಸದ ಮನೆ ಹೊಂದಿದ್ದಾರೆ.

ಪಂತ್ ಅವರ ವಾರ್ಷಿಕ ಆದಾಯ ಸುಮಾರು 10 ಕೋಟಿ ರೂಪಾಯಿ. ಪಂತ್ ಬಿಸಿಸಿಐ ಒಪ್ಪಂದದ ಎ ಗ್ರೇಡ್‌ನಲ್ಲಿ ಬರುತ್ತಾರೆ. ಅದರ ಅಡಿಯಲ್ಲಿ ವಾರ್ಷಿಕವಾಗಿ 5 ಕೋಟಿ ರೂಪಾಯಿ ಸಂಭಾವನೆ ಸಿಗುತ್ತದೆ. ಇದಲ್ಲದೇ ಡೆಲ್ಲಿ ಕ್ಯಾಪಿಟಲ್ಸ್‌ನಿಂದ 8 ಕೋಟಿ ರೂಪಾಯಿಗಳ ಸೀಸನ್ ಶುಲ್ಕವೂ ದೊರೆಯುತ್ತದೆ.
ರಿಷಬ್ ಪಂತ್ ಇದುವರೆಗೆ ಭಾರತ ಪರ 31 ಟೆಸ್ಟ್, 27 ಏಕದಿನ ಮತ್ತು 55 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್‌ನಲ್ಲಿ 43.33 ಸರಾಸರಿಯಲ್ಲಿ 2123 ರನ್‌ಗಳನ್ನು, ಏಕದಿನ ಪಂದ್ಯಗಳಲ್ಲಿ 36.52 ರ ಸರಾಸರಿಯಲ್ಲಿ 840 ರನ್ ಮತ್ತು ಟಿ20ಯಲ್ಲಿ 883 ರನ್ ಗಳಿಸಿದ್ದಾರೆ.