alex Certify ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗೋದು ಅಪಾಯದ ಸಂಕೇತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗೋದು ಅಪಾಯದ ಸಂಕೇತ

ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗೋದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ಹದಿಹರೆಯದವರಿಗೂ ಬಿಳಿ ಕೂದಲಿನ ಸಮಸ್ಯೆ ಶುರುವಾಗಿಬಿಟ್ಟಿದೆ. ಇದೆಲ್ಲಾ ಕಾಮನ್ ಅಂದ್ಕೊಂಡು ನೀವು ಸುಮ್ಮನಾಗಿಬಿಡಬೇಡಿ, ಯಾಕಂದ್ರೆ ಅವಧಿಗೂ ಮುನ್ನವೇ ಕೂದಲು ಬೆಳ್ಳಗಾದವರಿಗೆ ಹೃದಯದ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚು.

ವೃದ್ಧಾಪ್ಯಕ್ಕೂ ಮೊದಲೇ ಕೂದಲು ಬೆಳ್ಳಗಾದ್ರೆ ಅದು ಹೃದಯದ ತೊಂದರೆ ಬಗೆಗಿನ ಎಚ್ಚರಿಕೆಯ ಕರೆಗಂಟೆ ಎನ್ನುತ್ತಾರೆ ಸಂಶೋಧಕರು. ಹಾನಿಗೊಳಗಾದ ಡಿಎನ್ಎ, ಆಕ್ಸಿಡೇಟಿವ್ ಒತ್ತಡ, ಉರಿಯೂತ, ಹಾರ್ಮೋನುಗಳಲ್ಲಿನ ವ್ಯತ್ಯಾಸ, ಜೀವಕೋಶಗಳಲ್ಲಿನ ಬದಲಾವಣೆ ಕೂಡ ಕೂದಲು ಬೆಳ್ಳಗಾಗುವ ಸಮಸ್ಯೆಗೆ ಕಾರಣ.

ಹೃದಯದ ತೊಂದರೆಗೆ ಕೂಡ ಇವೇ ಮೂಲ ಕಾರಣಗಳು. ಈ ಬಗ್ಗೆ ಸಂಶೋಧನೆ ನಡೆಸಿರುವ ವಿಜ್ಞಾನಿಗಳು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಹಾಗಾಗಿ ಆದಷ್ಟು ಒತ್ತಡದ ಬದುಕಿನಿಂದ ದೂರವಿರಿ. ಮನಸ್ಸನ್ನು ಶಾಂತವಾಗಿಡಲು ಪ್ರಯತ್ನಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Úloha pre skutočných géniov: Hľadanie pytona v oceáne Výzva pre dravé zraky: nájdite ďalšie 4 čísla