alex Certify ಚಿಕ್ಕ ಮಕ್ಕಳ ಮಲಗಿಸುವ ಗೊಂದಲದ ಬಗ್ಗೆ ಪೋಷಕರಿಗೊಂದಿಷ್ಟು ಸಲಹೆಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಕ್ಕ ಮಕ್ಕಳ ಮಲಗಿಸುವ ಗೊಂದಲದ ಬಗ್ಗೆ ಪೋಷಕರಿಗೊಂದಿಷ್ಟು ಸಲಹೆಗಳು

ಸಾಮಾನ್ಯವಾಗಿ ಪುಟ್ಟ ಮಕ್ಕಳು ಅಮ್ಮನ ಜೊತೆಗೇ ಮಲಗುವುದನ್ನು ಅಭ್ಯಾಸ ಮಾಡಿಕೊಂಡಿರ್ತಾರೆ. ಮಕ್ಕಳನ್ನು ಜೊತೆಯಲ್ಲಿ ಮಲಗಿಸಿಕೊಳ್ಳುವುದೋ ಅಥವಾ ಪ್ರತ್ಯೇಕವಾಗಿ ಮಲಗಿಸಬೇಕೋ ಎಂಬ ಸಂದಿಗ್ಧತೆ ಹೆತ್ತವರಿಗೆ ಇರುವುದು ಸಹಜ. ಈ ಪ್ರಶ್ನೆಗಳಿಗೆಲ್ಲ ಸಂಶೋಧನೆಯೊಂದರಲ್ಲಿ ಉತ್ತರ ಸಿಕ್ಕಿದೆ.

ಅಮೆರಿಕದ ನಿಯತಕಾಲಿಕೆಯೊಂದರಲ್ಲಿ ಪ್ರಕಟವಾದ ವರದಿ ಪ್ರಕಾರ 2 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಪೋಷಕರೊಟ್ಟಿಗೆ ಮಲಗಬಾರದು. ಪ್ರತ್ಯೇಕವಾಗಿ ಮಲಗದೇ ಇದ್ದರೆ ಅವರ ದೇಹವು ಸರಿಯಾಗಿ ಬೆಳವಣಿಗೆಯಾಗುವುದಿಲ್ಲ. ಮಗು ಹುಟ್ಟಿ ಒಂದು ವರ್ಷದವರೆಗೂ ತಾಯಿ ತನ್ನ ಹಾಸಿಗೆಯಲ್ಲೇ ಮಗುವನ್ನು ಮಲಗಿಸಿಕೊಳ್ಳಬಹುದು. ನಂತರ ಅದೇ ಕೋಣೆಯಲ್ಲಿ ಸಣ್ಣ ಪ್ರತ್ಯೇಕ ಹಾಸಿಗೆ ಹಾಕಿ ಮಲಗಿಸಬೇಕು.

ಮಗುವಿಗೆ 5 ವರ್ಷವಾದ ಬಳಿಕ ಪ್ರತ್ಯೇಕ ಕೋಣೆಯಲ್ಲಿ ಮಲಗಿಸುವುದು ಉತ್ತಮ. ಆ ಕೊಠಡಿ ತಾಯಿಯ ಕೋಣೆಯ ಸಮೀಪದಲ್ಲೇ ಇರಲಿ. ಹಾಗಿದ್ದರೆ ಮಗು ರಾತ್ರಿ ಯಲ್ಲಿ ಹೆದರುವುದಿಲ್ಲ, ಆರಾಮಾಗಿ ಮಲಗುತ್ತದೆ. ಚಿಕ್ಕ ಮಕ್ಕಳ ಬೆಳವಣಿಗೆಯಲ್ಲಿ ಶೇ.70ರಷ್ಟು ಸಂಭವಿಸುವುದು ಅವರು ಮಲಗಿರುವಾಗ. ಹಾಗಾಗಿ ಮಕ್ಕಳಿಗೆ ರಾತ್ರಿಯಲ್ಲಿ ಮುಕ್ತವಾಗಿ ಮಲಗಲು ಅವಕಾಶ ನೀಡಬೇಕು. ಪ್ರತ್ಯೇಕ ಹಾಸಿಗೆ ಅಥವಾ ಕೋಣೆಯಲ್ಲಿ ಮಲಗಿದ್ದರೆ ಮಾತ್ರ ಇದು ಸಾಧ್ಯ.

ಮಕ್ಕಳ ಬೆನ್ನುಹುರಿಯ ಬೆಳವಣಿಗೆಗೆ ಹಾಸಿಗೆಯ ಮೇಲೆ ಹರಡಿ ಮಲಗುವುದು ಅವಶ್ಯಕ. ಹೆತ್ತವರೊಂದಿಗೆ ಒಂದೇ ಹಾಸಿಗೆಯಲ್ಲಿ ಮಲಗಿದ್ದರೆ ಬಯಸಿದಂತೆ ಆಚೀಚೆ ತಿರುಗಿ ಆರಾಮಾಗಿ ಮಲಗಲು ಸಾಧ್ಯವಿಲ್ಲ. ಅದಕ್ಕಾಗಿಯೇ ಚಿಕ್ಕ ಮಕ್ಕಳನ್ನು ಪ್ರತ್ಯೇಕವಾಗಿ ಮಲಗುವಂತೆ ಮಾಡುವುದು ಸೂಕ್ತ. ವೈದ್ಯಕೀಯ ತಜ್ಞರ ಪ್ರಕಾರ ಮಕ್ಕಳನ್ನು ಸ್ವಾವಲಂಬಿಗಳಾಗಿಸಲು ಪ್ರತ್ಯೇಕವಾಗಿ ಮಲಗಿಸುವುದು ಬಹಳ ಮುಖ್ಯ. ಹೀಗೆ ಮಾಡುವುದರಿಂದ ಅವರು ತಮ್ಮ ನಿದ್ದೆ ಮತ್ತು ಎಚ್ಚರದ ಸಮಯವನ್ನು ಅರಿಯುತ್ತಾರೆ. ಹಾಸಿಗೆಯನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬುದನ್ನೂ ತಿಳಿದುಕೊಳ್ಳುತ್ತಾರೆ. ಇದರಿಂದ ಅವರ ಆತ್ಮವಿಶ್ವಾಸ ಹೆಚ್ಚುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...