ವಾಹನ ಚಾಲಕ ಮಾನ್ಯವಿರುವ ಡ್ರೈವಿಂಗ್ ಲೈಸನ್ಸ್ ಹೊಂದಿರದೇ ಇದ್ದರೂ ವಿಮಾ ಕಂಪನಿಯು ಪರಿಹಾರವನ್ನು ಪಾವತಿಸಬೇಕೆಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಆ ಮೊತ್ತವನ್ನು ನಂತರ ವಾಹನದ ಮಾಲೀಕರಿಂದ ವಸೂಲಿ ಮಾಡಬಹುದು ಎಂದು ಸಲಹೆ ನೀಡಿದೆ.
ಪೆಯ್ಯಕುಲಂನ ಮೋಟಾರು ಅಪಘಾತಗಳ ಹಕ್ಕು ನ್ಯಾಯಮಂಡಳಿ ನೀಡಿದ ಆದೇಶದ ವಿರುದ್ಧ ಅಪರಾಧಿ ವಾಹನದ ಮಾಲಕ ತಾನಿಕೋಡಿ ಸಲ್ಲಿಸಿದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಮಧುರೈ ಪೀಠದ ಜಸ್ಟಿಸ್ ಟೀಕಾ ರಾಮನ್, ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಾಹನದ ಮಾಲೀಕರು ಪರಿಹಾರವನ್ನು ಪಾವತಿಸಲು ಹೊಣೆಗಾರರಾಗಿದ್ದಾರೆ ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ. ವಿಮಾ ಕಂಪನಿಯನ್ನು ದೋಷಮುಕ್ತಗೊಳಿಸಿದ ನ್ಯಾಯಪೀಠ, ಪರಿಹಾರ ಮೊತ್ತ ಪಾವತಿಸುವಂತೆ ಸೂಚಿಸಿದೆ. ಮೂಲ ಹಕ್ಕುದಾರರು ಸತ್ತವರ ಕಾನೂನುಬದ್ಧ ಉತ್ತರಾಧಿಕಾರಿಗಳು. ಅವರು ಪೆರಿಯಾಕುಲಂನ ಮೋಟಾರು ಅಪಘಾತ ಹಕ್ಕುಗಳ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು.
ಚಾಲಕನು ಟ್ರಾಕ್ಟರ್ ಅನ್ನು ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಚಾಲನೆ ಮಾಡಿದ್ದಾನೆ, ಯಾವುದೇ ಸೂಚನೆಯಿಲ್ಲದೆ ವಾಹನವನ್ನು ಟರ್ನ್ ಮಾಡಿದ್ದಾನೆ. ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುತ್ತಿದ್ದವನಿಗೆ ಡಿಕ್ಕಿ ಹೊಡೆದು, ಆತನ ಸಾವಿಗೆ ಕಾರಣನಾಗಿದ್ದಾನೆಂದು ಆರೋಪಿಸಲಾಗಿತ್ತು.
ಅಪಘಾತ ನಡೆದ ದಿನ ಚಾಲಕ ವಾಹನ ಚಲಾಯಿಸಲು ಡ್ರೈವಿಂಗ್ ಲೈಸನ್ಸ್ ಹೊಂದಿರಲಿಲ್ಲ ಎಂದು ಇನ್ಷೂರೆನ್ಸ್ ಕಂಪನಿ ವಾದಿಸಿತ್ತು. ಅಪರಾಧಿ ಸ್ಥಾನದಲ್ಲಿರೋ ವಾಹನ ಚಾಲಕ ಲೈಸನ್ಸ್ ಹೊಂದಿಲ್ಲದಿದ್ದರೂ, ವಿಮಾ ಕಂಪನಿಯನ್ನು ಹೊಣೆಗಾರಿಕೆಯಿಂದ ಮುಕ್ತಗೊಳಿಸಬಾರದು. ಅವರು ಮೊತ್ತವನ್ನು ಪಾವತಿಸಬೇಕೆಂದು ಮೇಲ್ಮನವಿ ಸಲ್ಲಿಸಲಾಗಿತ್ತು.