ಚಾರ್ಜ್ ಗೆಂದು ಹಾಕಿದ್ದ ಮೊಬೈಲ್ ತೆಗೆಯುವಾಗ ವಿದ್ಯುತ್ ಸ್ಪರ್ಶಿಸಿ ಬಾಲಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
9ನೇ ತರಗತಿ ವಿದ್ಯಾರ್ಥಿ ಹದಿನಾಲ್ಕು ವರ್ಷದ ರಾಫಿನ್ ಮೃತಪಟ್ಟ ಬಾಲಕನಾಗಿದ್ದು, ಮಂಗಳವಾರದಂದು ಈ ಘಟನೆ ಸಂಭವಿಸಿದೆ.
ಮಕ್ಕಳೊಂದಿಗೆ ಹೊರಗೆ ಆಟವಾಡುತ್ತಿದ್ದ ಈ ಬಾಲಕ ಮಳೆ ಬಂದ ಕಾರಣ ನೆನೆದುಕೊಂಡು ಬಂದಿದ್ದು, ಹಾಗೆಯೇ ಮೊಬೈಲ್ ಗೆ ಹಾಕಿದ್ದ ಚಾರ್ಜರ್ ತೆಗೆಯಲು ಮುಂದಾಗಿದ್ದಾನೆ. ಈ ವೇಳೆ ವಿದ್ಯುತ್ ಸ್ಪರ್ಶಿಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ.