ಆಚಾರ್ಯ ಚಾಣಕ್ಯ ಜೀವನಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳನ್ನು ಹೇಳಿದ್ದಾನೆ. ಅಂದು ಚಾಣಕ್ಯ ಹೇಳಿದ ಜೀವನ ವಿಧಾನ ಇಂದಿಗೂ ಅನ್ವಯವಾಗುತ್ತದೆ.
ದೈನಂದಿನ ಜೀವನದಲ್ಲಿ ಚಾಣಕ್ಯನ ನೀತಿಯನ್ನು ನೀವು ಪಾಲನೆ ಮಾಡಿದ್ರೆ ಅನೇಕ ಕಷ್ಟಗಳಿಂದ ದೂರವಿರಬಹುದು. ಚಾಣಕ್ಯರ ಪ್ರಕಾರ ದೈನಂದಿನ ಜೀವನದಲ್ಲಿ ಏನು ಮಾಡಬೇಕು? ಏನು ಮಾಡಬಾರದು ಎಂಬುದು ಇಲ್ಲಿದೆ.
ಚಾಣಕ್ಯನ ಪ್ರಕಾರ, ನೀವಿರುವ ಜಾಗದಲ್ಲಿ ಗಲಾಟೆ ನಡೆಯುತ್ತಿದ್ದರೆ ತಕ್ಷಣ ಆ ಜಾಗದಿಂದ ಹೋಗಬೇಕಂತೆ. ಇದು ನಿಮಗೆ ಹಾನಿಯಾಗುವುದಲ್ಲದೆ ಪೊಲೀಸರ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ.
ರಾಜನೊಬ್ಬ ತನ್ನ ಸೈನ್ಯದ ಜೊತೆ ನಿಮ್ಮ ರಾಜ್ಯದ ಮೇಲೆ ದಾಳಿ ಮಾಡಿದ್ರೆ, ನೀವು ಇದಕ್ಕೆ ಮೊದಲೇ ಸಿದ್ಧರಾಗಿಲ್ಲವೆಂದ್ರೆ ಸಮಯ ನೋಡಿ ಅಲ್ಲಿಂದ ತಪ್ಪಿಸಿಕೊಳ್ಳುವುದು ಉಚಿತ.
ಚಾಣಕ್ಯನ ನೀತಿ ಪ್ರಕಾರ, ರಾಜ್ಯದಲ್ಲಿ ಬರಗಾಲವಿದ್ದರೆ, ಭೂಮಿ ಬಂಜರಾದ್ರೆ ಅಲ್ಲಿಂದ ಬೇರೆ ಸ್ಥಳಕ್ಕೆ ಹೋಗುವುದು ಉಚಿತ. ಆಹಾರವಿಲ್ಲದೆ, ಕುಡಿಯಲು ನೀರಿಲ್ಲದೆ ಸಾಯುವ ಬದಲು ಇದು ಉತ್ತಮ.
ಸುತ್ತಮುತ್ತ ಅನೇಕ ಜನರು ವಾಸವಾಗಿರುತ್ತಾರೆ. ಅವ್ರಲ್ಲಿ ಕೆಲವರ ವ್ಯವಹಾರ ಅನುಮಾನ ಹುಟ್ಟಿಸುವಂತಿರುತ್ತದೆ. ಅವ್ರಿಂದ ತಕ್ಷಣ ದೂರ ಹೋಗುವುದು ಒಳಿತು.