ಛತ್ತಿಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸ್ವತಃ ತಾವೇ ಮುಂದಾಗಿ ಚಾಟಿಯಿಂದ ಹೊಡೆಸಿಕೊಂಡಿದ್ದಾರೆ. ಅರೇ ಇದೇನಪ್ಪಾ ಮುಖ್ಯಮಂತ್ರಿಗೆ ಹೊಡೆಯುವುದೆಂದರೆ ಏನು ಎಂದು ಅಚ್ಚರಿ ಪಡ್ತೀರಾ ? ಹಾಗಾದರೆ ಮುಂದೆ ಓದಿ.
ಹೌದು, ಧಾರ್ಮಿಕ ಆಚರಣೆಯ ಅಂಗವಾಗಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಈ ರೀತಿ ಚಾಟಿಯಿಂದ ಹೊಡೆಯಿಸಿಕೊಂಡಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದುರ್ಗ್ ಜಿಲ್ಲೆಯ ಗ್ರಾಮ ಒಂದರಲ್ಲಿ ನಡೆದ ಗೌರ ಗೌರಿ ಪೂಜೆಯ ಸಂದರ್ಭದಲ್ಲಿ ಭೂಪೇಶ್ ಬಘೇಲ್, ತಮ್ಮ ಮುಷ್ಟಿಯನ್ನು ಹಿಡಿದುಕೊಂಡಿದ್ದರೆ, ವ್ಯಕ್ತಿಯೊಬ್ಬ ಚಾಟಿಯಿಂದ ಅವರಿಗೆ ಹೊಡೆದಿದ್ದಾನೆ.
ಬುಡಕಟ್ಟು ಸಂಪ್ರದಾಯದಲ್ಲಿ ‘ಸೋತ’ ಎಂಬ ಸಂಪ್ರದಾಯವಿದ್ದು, ಈ ರೀತಿ ಹೊಡೆಯಿಸಿಕೊಂಡರೆ ದುರಾದೃಷ್ಟ ದೂರವಾಗುತ್ತದೆ ಎಂಬ ನಂಬಿಕೆ ಇದೆಯಂತೆ. ಈ ಸಂಪ್ರದಾಯದ ಭಾಗವಾಗಿ ಮುಖ್ಯಮಂತ್ರಿಗಳು ಚಾಟಿಯಿಂದ ಹೊಡೆಯಿಸಿಕೊಂಡಿದ್ದಾರೆ.