ಮಕ್ಕಳು ಮನೆಯಲ್ಲಿ ಇದ್ದರೆ ಎಂದರೆ ಏನಾದರೂ ತಿಂಡಿಗೆ ಪೀಡಿಸುತ್ತಾ ಇರುತ್ತಾರೆ. ಮಕ್ಕಳಿಗಾಗಿ ಇಲ್ಲಿ ಸುಲಭವಾಗಿ ಮಾಡಬಹುದಾದ ಚಾಕೋಲೇಟ್ ಮೌಸೆ ಮಾಡುವ ವಿಧಾನ ಇದೆ ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
2 ಮೊಟ್ಟೆ, ¼ ಕಪ್-ಸಕ್ಕರೆ ಪುಡಿ. 2 ½ ಕಪ್ –ವಿಪ್ಪಿಂಗ್ ಕ್ರೀಂ, ಚಾಕೋಲೇಟ್ ಚಿಪ್ಸ್-1 ಕಪ್.
ಮಾಡುವ ವಿಧಾನ:
ಮೊದಲಿಗೆ ಮೊಟ್ಟೆ ಹಾಗೂ ಸಕ್ಕರೆಯನ್ನು ಚೆನ್ನಾಗಿ ಬೀಟ್ ಮಾಡಿಕೊಳ್ಳಿ. ನಂತರ ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ 1 ಕಪ್ ವಿಪ್ಪಿಂಗ್ ಕ್ರೀಂ ಸೇರಿಸಿ ತುಸು ಬಿಸಿ ಮಾಡಿಕೊಂಡು ಇದನ್ನು ಮೊಟ್ಟೆ ಹಾಗೂ ಸಕ್ಕರೆ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಬೀಟ್ ಮಾಡಿಕೊಳ್ಳಿ.
ನಂತರ ಈ ಮಿಶ್ರಣವನ್ನು ಸಾಸ್ ಪ್ಯಾನ್ ಗೆ ಹಾಕಿಕೊಂಡು ಸಣ್ಣ ಉರಿಯಲ್ಲಿ ದಪ್ಪಗಾಗುವರೆಗೆ ಮಿಕ್ಸ್ ಮಾಡಿಕೊಳ್ಳಿ. ದಪ್ಪಗಾದರೆ ಸಾಕು ಬೇಯುವ ಅಗತ್ಯವಿಲ್ಲ. ನಂತರ ಗ್ಯಾಸ್ ಆಫ್ ಮಾಡಿಕೊಂಡು ಇದಕ್ಕೆ ಚಾಕೋಲೇಟ್ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಚಾಕೋಲೇಟ್ ಕರಗಿದ ನಂತರ ಇದನ್ನು ಒಂದು ಬೌಲ್ ಗೆ ಹಾಕಿಕೊಂಡು ಪ್ಲೇಟ್ ಮುಚ್ಚಿ ಫ್ರಿಡ್ಜ್ ನಲ್ಲಿ 2 ಗಂಟೆಗಳ ಕಾಲ ಇಡಿ. ಒಂದು ಬೌಲ್ ಗೆ ಉಳಿದ ವಿಪ್ಪಿಂಗ್ ಕ್ರೀಂ ಹಾಕಿಕೊಂಡು ಚೆನ್ನಾಗಿ ಬೀಟ್ ಮಾಡಿಕೊಳ್ಳಿ. ಅದಕ್ಕೆ ಈ ತಣ್ಣಗಿನ ಚಾಕೋಲೇಟ್ ಮಿಶ್ರಣ ಸೇರಿಸಿ ಮತ್ತೊಮ್ಮೆ ಬೀಟ್ ಮಾಡಿಕೊಂಡು ಚಿಕ್ಕ ಚಿಕ್ಕ ಕಪ್ ಗೆ ಪೈಪಿಂಗ್ ಬ್ಯಾಗ್ ನ ಸಹಾಯದಿಂದ ಹಾಕಿಕೊಂಡು ಸರ್ವ್ ಮಾಡಿ.