ಸಂಜೆ 5 ಗಂಟೆಯಾದ್ರೆ ಸಾಕು ಬಿಸಿ ಬಿಸಿ ಚಹಾ ಜೊತೆಗೆ ಏನಾದ್ರೂ ತಿನ್ನಬೇಕು ಎನಿಸಲು ಶುರುವಾಗುತ್ತದೆ. ದಿನಕ್ಕೊಂದು ಬಗೆಯ ಪಕೋಡಾ ಇದ್ರಂತೂ ಸ್ವರ್ಗಕ್ಕೆ ಮೂರೇ ಗೇಣು. ಬೆಂಡೆಕಾಯಿ ಪಕೋಡಾವನ್ನು ಕೂಡ ನೀವೊಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿ :
200 ಗ್ರಾಂ ಬೆಂಡೆಕಾಯಿ, 30 ಗ್ರಾಂ ಗರಂ ಮಸಾಲ, ಚಿಟಿಕೆ ಓಮ, ಒಂದು ಚಮಚ ನಿಂಬೆ ರಸ, ಕಡಲೆ ಹಿಟ್ಟು 80 ಗ್ರಾಂ, ಎಣ್ಣೆ 200 ಮಿಲಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಚ್ಚಖಾರದ ಪುಡಿ.
ಪಕೋಡಾ ಮಾಡುವ ವಿಧಾನ :
ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದಿಟ್ಟುಕೊಂಡು, ಚಿಕ್ಕದಾಗಿ ಕತ್ತರಿಸಿ. ಕಡಲೆ ಹಿಟ್ಟಿಗೆ ಉಪ್ಪು, ಓಮ, ಗರಂ ಮಸಾಲ, ನಿಂಬೆ ರಸ, ಖಾರದ ಪುಡಿ ಎಲ್ಲವನ್ನೂ ಹಾಕಿ ಪಕೋಡಾ ಹದಕ್ಕೆ ಕಲೆಸಿಕೊಳ್ಳಿ. ಅದರಲ್ಲಿ ಕತ್ತರಿಸಿ ಬೆಂಡೆಕಾಯಿಯನ್ನು ಮುಳುಗಿಸಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಇದರ ಜೊತೆಗೆ ಟೊಮೆಟೋ ಹಾಗೂ ಬೆಳ್ಳುಳ್ಳಿ ಚಟ್ನಿ ಒಳ್ಳೆ ಕಾಂಬಿನೇಷನ್. ಬಿಸಿ ಬಿಸಿ ಬೆಂಡೆಕಾಯಿ ಪಕೋಡಾವನ್ನು ಚಟ್ನಿ ಜೊತೆಗೆ ಸವಿಯಿರಿ.