ಚಳಿಗಾಲದಲ್ಲಿ ದಿನವಿಡೀ ಜಡತ್ವ ಕಾಣಿಸಿಕೊಳ್ಳುವುದು ಸಹಜ. ಇದನ್ನು ದೂರ ಮಾಡಿ ದಿನವಿಡೀ ಫ್ರೆಶ್ ಅಗಿ ಇರಬೇಕು ಎಂದರೆ ನೀವು ಈ ಕೆಲಸಗಳನ್ನು ಮಾಡಲೇ ಬೇಕು.
ಬೆಳಿಗ್ಗೆ ಎದ್ದಾಕ್ಷಣ ಮೈ ಬೆಚ್ಚಗಾಗಿಸುವ ವ್ಯಾಯಾಮಗಳನ್ನು ಮಾಡಿ. ಇದರಿಂದ ಜಡತ್ವ ದೂರವಾಗುವುದರ ಜೊತೆಗೆ ಮಾನಸಿಕ ಸ್ಥಿತಿಯೂ ಸುಧಾರಿಸುತ್ತದೆ.
ಚಳಿಗಾಲದಲ್ಲಿ ದೀರ್ಘ 8 ಗಂಟೆಗಳ ಕಾಲ ನಿದ್ದೆ ಮಾಡುವುದನ್ನು ತಪ್ಪಿಸದಿರಿ.
ಇದರಿಂದ ಸೋಮಾರಿತನ ದೂರವಾಗುತ್ತದೆ. ಅದೇ ರೀತಿ ಊಟ ಮಾಡದೆ ಇರುವ ತಪ್ಪನ್ನೂ ಮಾಡದಿರಿ.
ಹೆಚ್ಚುವರಿ ಕೊಬ್ಬನ್ನು ಕರಗಿಸುವಂಥ ವ್ಯಾಯಾಮಗಳನ್ನು ಮಾಡಲು ಮರೆಯದಿರಿ. ಅತಿಯಾದ ಆಹಾರ ಸೇವಿಸಿ ಮರುದಿನ ಡಯಟ್ ಮಾಡಲು ಮರೆಯದಿರಿ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ. ನೀರು ಕುಡಿಯುವಾಗ ಬೆಚ್ಚಗಿನ ನೀರೇ ನಿಮ್ಮ ಆದ್ಯತೆಯಾಗಲಿ.