ಚಳಿಗಾಲದಲ್ಲಿ ನೀವು ನಿಮ್ಮ ಸೌಂದರ್ಯದ ಕಾಳಜಿಗೆ ಅದೆಷ್ಟು ಮಹತ್ವ ನೀಡುತ್ತೀರೋ ಅಷ್ಟೇ ಮಹತ್ವವನ್ನು ನೀವು ಸೇವಿಸುವ ಆಹಾರಕ್ಕೂ ನೀಡುವುದು ಬಹಳ ಮುಖ್ಯ.
ಚಳಿಗಾಲದಲ್ಲಿ ಬಾರ್ಲಿ ಸೇವಿಸಿ. ಇದರಲ್ಲಿರುವ ನಾರಿನಂಶ ನಿಮ್ಮ ಸ್ನಾಯುಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಕೂದಲು ದಪ್ಪಗೆ ಬೆಳೆಯಲೂ ಪ್ರೇರೇಪಿಸುತ್ತದೆ.
ಹಸಿರು ತರಕಾರಿ ಹಾಗೂ ಸೊಪ್ಪುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕ್ಯಾರೆಟ್, ಆಲೂಗೆಡ್ಡೆ, ಗೆಣಸು ಮೊದಲಾದ ತರಕಾರಿಗಳು ಫೈಬರ್ ನಿಂದ ತುಂಬಿದ್ದು ನಿತ್ಯ ಇವುಗಳನ್ನು ಸೇವಿಸುವುದರಿಂದ ಆರೋಗ್ಯದ ಹಲವು ಪ್ರಯೋಜನಗಳನ್ನು ಪಡೆಯಬಹುದು.
ಸೀಸನಲ್ ಫ್ರುಟ್ ಸೇವಿಸಿ. ಎಳ್ಳು ಜ್ಯೂಸ್, ಚಿಕ್ಕಿ, ಲಡ್ಡು, ಚಟ್ನಿ ರೂಪದಲ್ಲಿ ಎಳ್ಳು ಸೇವಿಸಿ. ನೆಲಕಡಲೆಯ ಸಲಾಡ್ ಸೇವಿಸಿ. ಇದರ ಚಟ್ನಿ ಮಾಡಿಕೊಳ್ಳುವುದೂ ಒಳ್ಳೆಯದು. ತುಪ್ಪ, ಬೆಣ್ಣೆಗೂ ನಿಮ್ಮ ಆಹಾರ ಪದ್ಧತಿಯಲ್ಲಿ ಜಾಗವಿರಲಿ.