alex Certify ಚಳಿಗಾಲದಲ್ಲಿ ಹೆಚ್ಚು ಹೃದಯಾಘಾತದ ಅಪಾಯ: ಜೀವ ಉಳಿಸಿಕೊಳ್ಳಲು ಈ ರೀತಿ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ಹೆಚ್ಚು ಹೃದಯಾಘಾತದ ಅಪಾಯ: ಜೀವ ಉಳಿಸಿಕೊಳ್ಳಲು ಈ ರೀತಿ ಮಾಡಿ

ತೀವ್ರವಾದ ಚಳಿ ಮತ್ತು ಶೀತ ನಮ್ಮ ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹೃದಯದ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟಾಗುತ್ತದೆ. ನಿರಂತರ ತಾಪಮಾನ ಇಳಿಕೆಯಾಗುತ್ತಿದ್ರೆ ಹೃದಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು, ಏಕೆಂದರೆ ತೀವ್ರವಾದ ಚಳಿಯಿಂದ ಅನೇಕರಿಗೆ ಹೃದಯಾಘಾತವಾಗುತ್ತದೆ. ಇದು ಪ್ರಾಣಕ್ಕೇ ಅಪಾಯ ತರಬಹುದು. ಹೃದಯದ ಸಮಸ್ಯೆಯಿಂದ ಪಾರಾಗಿ ಪ್ರಾಣ ಉಳಿಸಿಕೊಳ್ಳಲು ಬಯಸಿದರೆ ಚಳಿಗಾಲದಲ್ಲಿ ಕೆಲವು ಪ್ರಮುಖ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಹೊರಗಿನ ಉಷ್ಣತೆಯು ಅತಿಯಾಗಿ ಕಡಿಮೆಯಾದಾಗ, ನಮ್ಮ ದೇಹವು ಸಾಮಾನ್ಯ ತಾಪಮಾನವನ್ನು ಪಡೆಯಲು ಮತ್ತು ಶಾಖವನ್ನು ಸಹಿಸಿಕೊಳ್ಳಲು ಹೊಂದಿಕೊಳ್ಳಲು ಪ್ರಾರಂಭಿಸುತ್ತದೆ. ಈಗಾಗಲೇ ಹೃದಯ ದುರ್ಬಲವಾಗಿರುವವರಿಗೆ ಈ ಹೊಂದಾಣಿಕೆ ಕಷ್ಟವಾಗುತ್ತದೆ. ಶೀತ ಹವಾಮಾನವು ನಿಮ್ಮ ದೇಹದ ಶಾಖವನ್ನು ಹೀರಿಕೊಳ್ಳುತ್ತದೆ, ಆದ್ದರಿಂದ ನಿಮ್ಮನ್ನು ಬೆಚ್ಚಗಿಡಲು ಹೃದಯ ಹೆಚ್ಚು ಶ್ರಮಿಸಬೇಕಾಗುತ್ತದೆ. ನಿಮ್ಮ ರಕ್ತನಾಳಗಳು ಬಿಗಿಯಾಗಿದ್ದರೆ, ಹೃದಯವನ್ನು ತಲುಪಲು ರಕ್ತವು ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ, ಇದು ಹೃದಯಾಘಾತಕ್ಕೆ ಕಾರಣವಾಗಬಹುದು. ಇದು ತುಂಬಾ ಅಪಾಯಕಾರಿ ಪರಿಸ್ಥಿತಿ.

ಕಡಿಮೆ ತಾಪಮಾನವು ನಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ತಾಪಮಾನ ಕಡಿಮೆಯಾದಾಗ, ಹೃದಯ ಬಡಿತ ಹೆಚ್ಚಾಗಬಹುದು. ನಿಮ್ಮ ಹೃದಯವು ಸಾಮಾನ್ಯಕ್ಕಿಂತ ಹೆಚ್ಚು ಕೆಲಸ ಮಾಡಲು ಪ್ರಾರಂಭಿಸುತ್ತದೆ. ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇರುತ್ತದೆ. ಇದರಿಂದ ಹೃದಯಾಘಾತ ಮತ್ತು ಮೆದುಳಿನ ಸ್ಟ್ರೋಕ್ ಅಪಾಯವು ಹೆಚ್ಚಾಗುತ್ತದೆ. ವಯಸ್ಸಾದವರಲ್ಲಿ ಈ ಅಪಾಯ ಇನ್ನೂ ಹೆಚ್ಚು.  

ಚಳಿಗಾಲದಲ್ಲಿ ಹೃದಯಾಘಾತದಿಂದ ದೂರವಿರಲು ಏನು ಮಾಡಬೇಕು?

ನೀವು ಹೆಚ್ಚಿನ ಸಮಯವನ್ನು ಎಲ್ಲಿ ಕಳೆಯುತ್ತೀರೋ ಆ ಕೋಣೆಯಲ್ಲಿ ಗರಿಷ್ಠ ತಾಪಮಾನ 18 ° C ಇರುವಂತೆ ನೋಡಿಕೊಳ್ಳಿ. ದಪ್ಪನೆಯ ಕಂಬಳಿಗಳಿಂದ ನಿಮ್ಮನ್ನು ಬೆಚ್ಚಗಾಗಿಸಿ. ತಲೆಯ ಮೇಲೆ ಉಣ್ಣೆಯ ಕ್ಯಾಪ್ ಧರಿಸದೆ ರಾತ್ರಿ ಮಲಗಬೇಡಿ. ಎಲೆಕ್ಟ್ರಿಕ್ ಕಂಬಳಿ ಕೂಡ ಮಾರುಕಟ್ಟೆಯಲ್ಲಿ ಬರುತ್ತದೆ, ನೀವು ಅದನ್ನೂ ಬಳಸಬಹುದು.ಒಂದೇ ಒಂದು ದಪ್ಪ ಬಟ್ಟೆಯ ಬದಲಿಗೆ, ತೆಳುವಾದ ಲೇಯರ್ಡ್ ಬಟ್ಟೆಗಳನ್ನು ಧರಿಸಿ. ಇದು ಶೀತವನ್ನು ಪ್ರವೇಶಿಸದಂತೆ ತಡೆಯುತ್ತದೆ ಮತ್ತು ನಿಮ್ಮನ್ನು ಬೆಚ್ಚಗಾಗಿಸುತ್ತದೆ.

ಟೋಪಿ, ಸ್ಕಾರ್ಫ್ ಮತ್ತು ಕೈಗವಸುಗಳು ಸಹ ಶಾಖವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತವೆ. ಮನೆಯಲ್ಲಿ ಹೊದಿಕೆಯಿಂದ ಹೊರಬರುವುದು ಕಷ್ಟವೆನಿಸಿದರೆ ಆಕ್ಟಿವ್‌ ಆಗಿರಿ, ದೇಹವನ್ನು ಚಲಿಸುತ್ತಿರಿ, ಇದು ಆಂತರಿಕ ತಾಪಮಾನವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ರೋಗನಿರೋಧಕ ವ್ಯವಸ್ಥೆಯು ಸಹ ಸುಧಾರಿಸುತ್ತದೆ.ದೇಹವನ್ನು ಬೆಚ್ಚಗಿಡಲು ಮತ್ತು ಅಗತ್ಯವಾದ ಶಕ್ತಿಯನ್ನು ನೀಡಲು ಬಿಸಿ ಆಹಾರ ಮತ್ತು ಆರೋಗ್ಯಕರ ಬಿಸಿ ಪಾನೀಯಗಳನ್ನು ಸೇವಿಸಿ.

ಮನೆಯಲ್ಲಿ ತಯಾರಿಸಿದ ತರಕಾರಿ ಸೂಪ್ ಅಥವಾ ಬಿಸಿ ಊಟವನ್ನು ಸೇವಿಸಿ.  ಚಳಿಯಿಂದ ಪಾರಾಗಲು ಬೆಂಕಿ, ಹೀಟರ್ ಅಥವಾ ಬಿಸಿ ಬ್ಲೋವರ್‌ ಸಹಾಯವನ್ನು ತೆಗೆದುಕೊಳ್ಳಬಹುದು. ಇದರ ಹೊರತಾಗಿ ಬಿಸಿ ಎಣ್ಣೆ ಮಸಾಜ್ ಕೂಡ ಪ್ರಯೋಜನಕಾರಿಯಾಗಿದೆ. ಈ ರೀತಿ ದೇಹವನ್ನು ಬೆಚ್ಚಗಿರಿಸಿಕೊಂಡಲ್ಲಿ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...