alex Certify ಚಳಿಗಾಲದಲ್ಲಿ ಹೆಚ್ಚಾಗುವ ತೂಕ ನಷ್ಟಕ್ಕೆ ಸೇವಿಸಿ ಈ ಆಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ಹೆಚ್ಚಾಗುವ ತೂಕ ನಷ್ಟಕ್ಕೆ ಸೇವಿಸಿ ಈ ಆಹಾರ

ಚಳಿಗಾಲದಲ್ಲಿ ಹೊರಗಡೆ ತುಂಬಾ ಚಳಿ ಇರುವುದರಿಂದ ಕೆಲವರು ಬಿಸಿಬಿಸಿಯಾದ ವಸ್ತುಗಳನ್ನು ಸೇವಿಸಲು ಇಷ್ಟಪಡುತ್ತಾರೆ. ಹಾಗಾಗಿ ಅತಿಯಾಗಿ ಕುರುಕಲು, ಆಯಿಲ್ ಫುಡ್ ಗಳನ್ನು ಸೇವಿಸಿ ತೂಕವನ್ನು ಹೆಚ್ಚಿಸಿಕೊಳ್ಳುತ್ತಾರೆ. ಹಾಗಾಗಿ ಅಂತವರು ತಮ್ಮ ತೂಕವನ್ನು ಕಡಿಮೆ ಮಾಡಲು ಈ ಆಹಾರಗಳನ್ನು ಸೇವಿಸಿ.

ಕ್ಯಾರೆಟ್ : ಇದು ತೂಕವನ್ನು ಕಳೆದುಕೊಳ್ಳಲು ಸಹಕಾರಿ. ಇದರಲ್ಲಿ ಫೈಬರ್ ಮತ್ತು ನೀರಿನಾಂಶ ಹೆಚ್ಚಾಗಿದೆ. ಇದು ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ. ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ.

ಕಡಲೆಕಾಯಿ : ನೀವು ಹಸಿವನ್ನು ನಿಗ್ರಹಿಸಲು ಆ ಮೂಲಕ ತೂಕವನ್ನು ಕಡಿಮೆ ಮಾಡಲು ಕಡಲೆಕಾಯಿ ಸಹಕಾರಿಯಾಗಿದೆ. ಇದನ್ನು ಸೇವಿಸಿದರೆ ಹೊಟ್ಟೆ ದೀರ್ಘಕಾಲ ತುಂಬಿರುತ್ತದೆ. ಇದರಿಂದ ಅತಿಯಾದ ಆಹಾರ ಸೇವನೆಯನ್ನು ನಿಯಂತ್ರಿಸಬಹುದು.

ಪೇರಳೆ : ಇದು ಕೂಡ ಹೆಚ್ಚಿನ ನೀರು ಮತ್ತು ಫೈಬರ್ ಅನ್ನು ಹೊಂದಿದೆ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಮತ್ತು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ಇದರಿಂದ ತೂಕ ವೇಗವಾಗಿ ಇಳಿಯುತ್ತದೆ. ಇದು ಹಸಿವನ್ನು ಕಡಿಮೆ ಮಾಡುತ್ತದೆ.

ಹಸಿರು ತರಕಾರಿ/ಪಾಲಕ್ : ಪಾಲಕ್ ನಲ್ಲಿ ಕರಗದ ನಾರಿನಾಂಶವಿದೆ. ಇದು ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಇದರಿಂದ ತೂಕ ಇಳಿಕೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...