alex Certify ಚಳಿಗಾಲದಲ್ಲಿ ಹೆಚ್ಚಾಗಬಹುದು ಪೈಲ್ಸ್‌ ಸಮಸ್ಯೆ; ತೊಂದರೆಯಿಂದ ಪಾರಾಗಲು ಇಲ್ಲಿದೆ ಟಿಪ್ಸ್‌….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ಹೆಚ್ಚಾಗಬಹುದು ಪೈಲ್ಸ್‌ ಸಮಸ್ಯೆ; ತೊಂದರೆಯಿಂದ ಪಾರಾಗಲು ಇಲ್ಲಿದೆ ಟಿಪ್ಸ್‌….!

ಪೈಲ್ಸ್ ಒಂದು ಸಾಮಾನ್ಯ ಸಮಸ್ಯೆ, ಇದನ್ನು ‘ಹೈಮೊರೊಯಿಡ್ಸ್’ ಎಂದು ಕರೆಯಲಾಗುತ್ತದೆ. ಗುದನಾಳದ ಸುತ್ತ ರಕ್ತನಾಳಗಳ ಹಿಗ್ಗುವಿಕೆಯಿಂದ ಪೈಲ್ಸ್‌ ಸಮಸ್ಯೆ ಉಂಟಾಗುತ್ತದೆ. ಇದು ತೀವ್ರವಾದ ನೋವಿಗೆ ಕಾರಣವಾಗುತ್ತದೆ. ಗುದದ್ವಾರದ ಸುತ್ತ ತುರಿಕೆ, ಮೂತ್ರ ವಿಸರ್ಜನೆ ಮತ್ತು ಮಲವಿಸರ್ಜನೆಯೊಂದಿಗೆ ರಕ್ತಸ್ರಾವ ಮತ್ತು ಅಸಹನೀಯ ನೋವು ಸೇರಿದಂತೆ ತೀವ್ರವಾದ ರೋಗಲಕ್ಷಣಗಳನ್ನು ನೀವು ಗಮನಿಸಿದರೆ, ತಕ್ಷಣ ಚಿಕಿತ್ಸೆ ಪಡೆದುಕೊಳ್ಳಬೇಕು. ಹೆಮೊರೊಯಿಡ್ಸ್ ಅಥವಾ ಪೈಲ್ಸ್‌ ತೊಂದರೆ ಇರುವವರು ಚಳಿಗಾಲದಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ.

ಪೈಲ್ಸ್‌ನಿಂದ ಪರಿಹಾರ ಪಡೆಯುವುದು ಹೇಗೆ?

ಚಳಿಗಾಲದಲ್ಲಿ ತಾಪಮಾನ ಕಡಿಮೆಯಾದಾಗ, ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ ಮತ್ತು ರಕ್ತದ ಹರಿವಿನಲ್ಲಿ ಅಡಚಣೆ ಉಂಟಾಗುತ್ತದೆ. ಅದರ ಗಂಭೀರ ರೋಗಲಕ್ಷಣಗಳನ್ನು ತಡೆಗಟ್ಟಲು ಪೈಲ್ಸ್ ರೋಗಿಗಳು ವಿಶೇಷ ಕಾಳಜಿ ವಹಿಸಬೇಕು.

ಫೈಬರ್ ಭರಿತ ಆಹಾರವನ್ನು ತೆಗೆದುಕೊಳ್ಳಿ

ಫೈಬರ್ ಜೀರ್ಣಕ್ರಿಯೆಗೆ ಮಾತ್ರವಲ್ಲ, ಕರುಳಿನ ಚಲನೆಯನ್ನು ನಿಯಂತ್ರಿಸುವ ಮೂಲಕ ಪೈಲ್ಸ್‌ಗೆ ಸಹಾಯ ಮಾಡುತ್ತದೆ. ಇದು ಅವಶ್ಯಕವಾಗಿದೆ. ಏಕೆಂದರೆ ಪೈಲ್ಸ್‌ನಲ್ಲಿ ಕರುಳಿನ ಚಲನೆಯ ಸಮಯದಲ್ಲಿ ರಕ್ತಸ್ರಾವವಾಗಬಹುದು. ಮೃದುವಾದ ಕರುಳಿನ ಚಲನೆಯ ಮೂಲಕ ನೋವು, ಅಸ್ವಸ್ಥತೆ ಮತ್ತು ರಕ್ತಸ್ರಾವವನ್ನು ಇದು ಕಡಿಮೆ ಮಾಡುತ್ತದೆ. ದೈನಂದಿನ ಆಹಾರದಲ್ಲಿ ನೀವು ಫೈಬರ್ ಅನ್ನು ಸೇರಿಸಿಕೊಳ್ಳಬೇಕು. ನಾರಿನ ಆಹಾರ, ಧಾನ್ಯಗಳು, ದ್ವಿದಳ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ತೆಗೆದುಕೊಳ್ಳಿ. ಇದಲ್ಲದೆ ಸಾಕಷ್ಟು ನೀರು ಕುಡಿಯಿರಿ.

ಮಸಾಲೆಯುಕ್ತ ಆಹಾರದಿಂದ ದೂರವಿರಿ

ಪೈಲ್ಸ್ ರೋಗಿಗಳಿಗೆ ಮಸಾಲೆಯುಕ್ತ ಆಹಾರವು ದೊಡ್ಡ ಶತ್ರುವಿದ್ದಂತೆ. ಇದು ಜೀರ್ಣಕ್ರಿಯೆಯನ್ನು ಹಾಳುಮಾಡುವುದು ಮಾತ್ರವಲ್ಲದೆ ಕರುಳಿನ ಚಲನೆಯ ರೀತಿಯಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ವಿಶೇಷವಾಗಿ ಕೆಂಪು ಮೆಣಸಿನ ಪುಡಿಯಿಂದ ಸಾಧ್ಯವಾದಷ್ಟು ದೂರವಿರಿ. ಏಕೆಂದರೆ ಅದು ನಮ್ಮ ಕರುಳಿಗೆ ಅಂಟಿಕೊಳ್ಳುವುದರಿಂದ ಕಿರಿಕಿರಿಯು ಹೆಚ್ಚಾಗುತ್ತದೆ. ನಿಮ್ಮ ಆಹಾರದಲ್ಲಿ ಮಸಾಲೆಯುಕ್ತ ಮತ್ತು ಎಣ್ಣೆಯಲ್ಲಿ ಹುರಿದ ಆಹಾರವನ್ನು ಕಡಿಮೆ ಮಾಡಿದರೆ ಪೈಲ್ಸ್‌ ಕೂಡ ನಿಯಂತ್ರಣದಲ್ಲಿರುತ್ತದೆ.

ಅಗತ್ಯ ಎನಿಸಿದಾಗ ತಕ್ಷಣ ಶೌಚಕ್ಕೆ ಹೋಗಿ

ನಾವು ಕೆಲಸಗಳಲ್ಲಿ ನಿರತರಾಗಿರುವಾಗ ಅಥವಾ ಪ್ರಯಾಣ ಮಾಡುವಾಗ ಮೂತ್ರ ಬಂದರೂ ಕಟ್ಟಿಕೊಳ್ಳುತ್ತೇವೆ. ಕರುಳಿನ ಚಲನೆಯನ್ನು ವಿಳಂಬಗೊಳಿಸುತ್ತೇವೆ. ಇದೊಂದು ಕೆಟ್ಟ ಅಭ್ಯಾಸ.  ಪ್ರಕೃತಿಯ ಕರೆಯನ್ನು ನಿಲ್ಲಿಸುವುದರಿಂದ ಅನೇಕ ಸಮಸ್ಯೆಗಳು ಉಂಟಾಗಬಹುದು. ವಿಶೇಷವಾಗಿ ಪೈಲ್ಸ್ ಇದ್ದರೆ ಅವರ ಗುದನಾಳದ ಸ್ನಾಯುಗಳು ಸಡಿಲಗೊಳ್ಳುತ್ತವೆ, ಇದು ಅಸ್ವಸ್ಥತೆಯನ್ನು ಹೆಚ್ಚಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...