alex Certify ಚಳಿಗಾಲದಲ್ಲಿ ಹೀಗಾಗುತ್ತಂತೆ ಪುರುಷರ ಖಾಸಗಿ ಅಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ಹೀಗಾಗುತ್ತಂತೆ ಪುರುಷರ ಖಾಸಗಿ ಅಂಗ

Cold weather: mens private part shrink during the winter season and this is  the reason - ठंड की वजह से सिकुड़ जाता है पुरुषों का 'प्राइवेट पार्ट' -  Navbharat Times

ಋತು ಬದಲಾದಂತೆ ವಾತಾವರಣದ ಜೊತೆ ನಮ್ಮ ದೇಹದಲ್ಲಿಯೂ ಸಾಕಷ್ಟು ಬದಲಾವಣೆಗಳಾಗುತ್ತವೆ. ಚಳಿಗಾಲದಲ್ಲಿ ತುಂಬಾ ಚಳಿಯಿರುವ ಸಂದರ್ಭದಲ್ಲಿ ಮಹಿಳೆಯರ ಖಾಸಗಿ ಅಂಗದಲ್ಲಿ ಬದಲಾವಣೆ ಕಾಣಬಹುದು.

ಖಾಸಗಿ ಅಂಗ ಮೃದುತ್ವ ಕಳೆದುಕೊಂಡು ಶುಷ್ಕವಾಗುತ್ತದೆ. ಈಗ ಪುರುಷರ ಖಾಸಗಿ ಅಂಗದಲ್ಲಿ ಆಗುವ ಬದಲಾವಣೆ ಬಗ್ಗೆ ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ.

ʼಸಂಗಾತಿʼ ಜೊತೆ ಸಂಬಂಧ ಗಟ್ಟಿಯಾಗಬೇಕೆಂದ್ರೆ ಹೀಗೆ ಮಾಡಿ

ಲೈಂಗಿಕ ತಜ್ಞರ ಪ್ರಕಾರ, ಚಳಿಗಾಲದಲ್ಲಿ ಪುರುಷರ ಖಾಸಗಿ ಅಂಗ ಅಂದ್ರೆ ಶಿಶ್ನ ಸಂಕುಚಿತಗೊಳ್ಳುತ್ತದೆ. ಇದು ಸೆಕ್ಸ್ ಮೇಲೆ ಪ್ರಭಾವ ಬೀರುತ್ತದೆ. ಕ್ಲೈಮ್ಯಾಕ್ಸ್ ತಲುಪಲು ಕಷ್ಟವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಚಳಿಗಾಲದಲ್ಲಿ ಚಳಿ ಹೆಚ್ಚಾಗ್ತಿದ್ದಂತೆ ಶಿಶ್ನದವರೆಗೆ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ರಕ್ತನಾಳಗಳಲ್ಲಿ ರಕ್ತ ಸಂಚಾರ ನಿಧಾನವಾಗುವುದ್ರಿಂದ ಈ ಸಮಸ್ಯೆ ಎದುರಾಗುತ್ತದೆಯಂತೆ.

ಚಳಿ ತುಂಬಾ ಹೆಚ್ಚಿದ್ದರೆ ಪುರುಷರ ಶಿಶ್ನ ಶೇಕಡಾ 50ರಷ್ಟು ಚಿಕ್ಕದಾಗುತ್ತದೆಯಂತೆ. ದಪ್ಪದಲ್ಲಿ ಶೇಕಡಾ 20-30 ರಷ್ಟು ಚಿಕ್ಕದಾಗುತ್ತದೆಯಂತೆ. ಶಿಶ್ನದ ಗಾತ್ರವೊಂದೇ ಅಲ್ಲ ಸಂವೇದನಾಶೀಲತೆ ಕೂಡ ಕಡಿಮೆಯಾಗುತ್ತದೆ. ಶಿಶ್ನವನ್ನು ಸಂಗಾತಿ ಸ್ಪರ್ಶಿಸಿದ್ರೂ ಬಹುತೇಕ ಬಾರಿ ಉತ್ತೇಜನಕ್ಕೊಳಗಾಗುವುದಿಲ್ಲ. ಇದೇ ಕಾರಣಕ್ಕೆ ಕ್ಲೈಮ್ಯಾಕ್ಸ್ ತಲುಪಲು ಚಳಿಗಾಲದಲ್ಲಿ ಪುರುಷರಿಗೆ ಕಷ್ಟವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...