ಚಳಿಗಾಲದಲ್ಲಿ ತಾಪಮಾನ ತೀವ್ರವಾಗಿ ಕುಸಿದಾಗ ಪ್ರತಿದಿನ ಸ್ನಾನ ಮಾಡುವುದೇ ಕಷ್ಟ. ಹಾಗಾಗಿ ಎಲ್ಲರೂ ಗೀಸರ್ ಅಥವಾ ಹೀಟಿಂಗ್ ರಾಡ್ ಮೂಲಕ ಬಿಸಿ ನೀರಿನ ಸ್ನಾನ ಮಾಡಲು ಇಷ್ಟಪಡುತ್ತಾರೆ. ಚಳಿಯಲ್ಲಿ ತಣ್ಣೀರು ಸ್ನಾನ ಅಸಾಧ್ಯವಾಗಿರುವುದರಿಂದ ಇದು ಉತ್ತಮ ಮಾರ್ಗ. ಆದರೆ ಕೆಲವರು ತಣ್ಣೀರಲ್ಲೇ ಸ್ನಾನ ಮಾಡುವ ದುಸ್ಸಾಹಸಕ್ಕೆ ಕೈಹಾಕುತ್ತಾರೆ. ಇದು ಅತ್ಯಂತ ಅಪಾಯಕಾರಿ.
ಚಳಿಗಾಲದಲ್ಲಿ ಸ್ನಾನ ಮಾಡುವಾಗ ಜಾಗರೂಕರಾಗಿರಬೇಕು. ಚಳಿಗಾಲದಲ್ಲಿ ತಣ್ಣೀರಿನಿಂದ ಸ್ನಾನ ಮಾಡಿದ್ರೆ ಬ್ರೈನ್ ಸ್ಟ್ರೋಕ್‌ಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ತಣ್ಣೀರಿನಿಂದ ಸ್ನಾನ ಮಾಡಿ ಬ್ರೈನ್ ಸ್ಟ್ರೋಕ್‌ಗೆ ತುತ್ತಾದ ಹಲವು ಉದಾಹರಣೆಗಳಿವೆ. ಅನೇಕ ಸಂದರ್ಭಗಳಲ್ಲಿ ಜನರು ಸಾಯುತ್ತಾರೆ. ಆದ್ದರಿಂದ ನೀವು ಶೀತಕ್ಕೆ ಸಂವೇದನಾಶೀಲರಾಗಿದ್ದರೆ, ಮಾರಣಾಂತಿಕವೆಂದು ಸಾಬೀತುಪಡಿಸುವ ಅಂತಹ ತಪ್ಪನ್ನು ಎಂದಿಗೂ ಮಾಡಬೇಡಿ.
ಬ್ರೈನ್ ಸ್ಟ್ರೋಕ್ ಒಂದು ಗಂಭೀರ ಕಾಯಿಲೆ. ಮೆದುಳಿನ ಪಾರ್ಶ್ವವಾಯು ಸಮಸ್ಯೆಯು ಯಾವುದೇ ಸಮಯದಲ್ಲಿ ಸಂಭವಿಸಬಹುದು. ಆದರೆ ಚಳಿಗಾಲದಲ್ಲಿ ಅದರ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಹಾಗಾಗಿ ಈ ಬಗ್ಗೆ ನಿರ್ಲಕ್ಷ ಮಾಡಬಾರದು. ಚಳಿಗಾಲದಲ್ಲಿ ಬಿಸಿ ನೀರಿನಲ್ಲಿಯೇ ಸ್ನಾನ ಮಾಡಿ. ಅಕಸ್ಮಾತ್ ನಿಮ್ಮಲ್ಲಿ ಮೆದುಳಿನ ಸ್ಟ್ರೋಕ್‌ಗೆ ಸಂಬಂಧಿಸಿದ ಲಕ್ಷಣಗಳೇನಾದರೂ ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ತಕ್ಷಣ ಎಚ್ಚೆತ್ತುಕೊಂಡರೆ ಜೀವ ಉಳಿಸಿಕೊಳ್ಳಬಹುದು.
ಮೆದುಳು ಸ್ಟ್ರೋಕ್ ಲಕ್ಷಣಗಳು…
ದೇಹದ ಯಾವುದೇ ಭಾಗದಲ್ಲಿ ಮರಗಟ್ಟುವಿಕೆ
ಕಣ್ಣುಗಳಿಂದ ಸ್ಪಷ್ಟವಾಗಿ ನೋಡಲು ಸಾಧ್ಯವಾಗದೇ ಇರುವುದು
ದೇಹದಲ್ಲಿ ದೌರ್ಬಲ್ಯ
ವಿಪರೀತ ತಲೆನೋವು
ವಾಂತಿ ಅಥವಾ ವಾಕರಿಕೆ
ಮಾತನಾಡಲು ಅಥವಾ ಅರ್ಥಮಾಡಿಕೊಳ್ಳಲು ತೊಂದರೆ
ಉಸಿರಾಟದ ತೊಂದರೆ
ಮೆದುಳಿನಲ್ಲಿ ರಕ್ತಸ್ರಾವದಿಂದ ಮೂರ್ಛೆ ಹೋಗುವುದು.