alex Certify ಚಳಿಗಾಲದಲ್ಲಿ ಸಂಭೋಗ ಸುಖ ಹೆಚ್ಚಿಸುತ್ತೆ ಈ ʼಟಿಪ್ಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ಸಂಭೋಗ ಸುಖ ಹೆಚ್ಚಿಸುತ್ತೆ ಈ ʼಟಿಪ್ಸ್ʼ

ಪ್ರೀತಿ, ಪ್ರಣಯ ಮತ್ತು ಲೈಂಗಿಕತೆ ದಂಪತಿಯನ್ನು ಮತ್ತಷ್ಟು ಹತ್ತಿರ ಮಾಡುತ್ತೆ. ಪ್ರೀತಿಗಾಗಿ ಯಾವುದೇ ಋತುವಿಲ್ಲ. ಆದ್ರೆ ಚಳಿಗಾಲದಲ್ಲಿ ಸಂಭೋಗ ವಿಶೇಷ ಸುಖ ನೀಡುತ್ತದೆ.

ಚುಮು ಚುಮು ಚಳಿಯಲ್ಲಿ ಬೆಚ್ಚಗಿನ ಮೈ ಸ್ಪರ್ಶವಾದಾಗ ದಂಪತಿ ಮಧ್ಯೆ ಹೊಸ ಉತ್ಸಾಹ ಮೂಡುತ್ತದೆ. ಸಂಭೋಗ, ಪ್ರೀತಿ ದ್ವಿಗುಣಗೊಳ್ಳುತ್ತದೆ. ಚಳಿಗಾಲದಲ್ಲಿ ಸಂಭೋಗ ಸುಖ ಹೆಚ್ಚಿಸಲು ಇಲ್ಲಿದೆ ಕೆಲ ಟಿಪ್ಸ್.

ಚಳಿಗಾಲದಲ್ಲಿ ಬೆಂಕಿ ಬಳಿ ಕುಳಿತು ನಿಮ್ಮ ತೋಳುಗಳಿಂದ ಸಂಗಾತಿಯನ್ನು ಬಳಸಿ. ಚಳಿಗಾಲದಲ್ಲಿ ರೋಮ್ಯಾನ್ಸ್ ಶುರುವಾಗಲು ಇದಕ್ಕಿಂತ ಒಳ್ಳೆ ಆಪ್ಷನ್ ಬೇರೊಂದಿಲ್ಲ.

ರಾತ್ರಿ ಒಂದೇ ಹಾಸಿಗೆಯಲ್ಲಿ ಒಂದೇ ಹೊದಿಕೆಯೊಳಗೆ ಮಲಗುವುದನ್ನು ರೂಢಿ ಮಾಡಿಕೊಳ್ಳಿ. ಹಾಗೆ ನಿಮ್ಮ ತುಂಟತನ ಕಡಿಮೆಯಾಗಲು ಬಿಡಬೇಡಿ.

ನಿಮ್ಮಿಷ್ಟದ ಪ್ರಣಯ ಗೀತೆ ಜೊತೆ ನಿಧಾನವಾಗಿ ಸಂಗಾತಿ ದೇಹವನ್ನು ಸ್ಪರ್ಶಿಸಿ.

ಬಾತ್ ಟಬ್ಬಿನಲ್ಲಿ ಬೆಚ್ಚಗಿನ ನೀರಿನಲ್ಲಿ ಇಬ್ಬರೂ ಸ್ನಾನ ಮಾಡಿ. ಚಳಿಗಾಲದಲ್ಲಿ ರೋಮ್ಯಾನ್ಸ್ ಹೆಚ್ಚಿಸಲು ಇದು ಒಳ್ಳೆ ಉಪಾಯ.

ಬೆಳಿಗ್ಗೆ ಜಾಗಿಂಗ್ ನಂತ್ರ ಪಾರ್ಕ್ ನ ಬೆಂಚ್ ಮೇಲೆ ಕೈ ಕೈ ಹಿಡಿದು ಕುಳಿತುಕೊಳ್ಳಿ. ಬೆಳಗ್ಗಿನ ಈ ರೋಮ್ಯಾನ್ಸ್ ನಿಮ್ಮ ಹಾಗೂ ಸಂಗಾತಿ ಮುಖದಲ್ಲಿ ನಗು ಮೂಡಿಸುತ್ತದೆ. ಪ್ರೀತಿಯ ಹಿಡಿತ ಒತ್ತಡ ಕಡಿಮೆ ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...