ಅನೇಕರು ಶುಂಠಿ ಟೀ ಇಷ್ಟಪಡ್ತಾರೆ. ಚಳಿಗಾಲದಲ್ಲಿ ಅನೇಕರು ಶುಂಠಿ ಟೀ ಕುಡಿಯುತ್ತಾರೆ. ಅತ್ಯುತ್ತಮ ರುಚಿ ಹಾಗೂ ತೂಕ ಕಡಿಮೆ ಮಾಡಲು ಇದು ಸಹಾಯಕಾರಿ ಎಂಬುದು ಎಲ್ಲರಿಗೂ ಗೊತ್ತು. ಆದ್ರೆ ಚಳಿಗಾಲದಲ್ಲಿ ಶುಂಠಿ ಟೀ ಸೇವನೆ ಮಾಡುವುದು ಹಾನಿಕರ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಟೀ ಯಾವುದೇ ಇರಲಿ, ಮಿತಿ ಮೀರಿದ್ರೆ ಆರೋಗ್ಯಕ್ಕೆ ಹಾನಿಕರ. ಪ್ರತಿ ದಿನ ಒಬ್ಬ ವ್ಯಕ್ತಿಗೆ 5 ಗ್ರಾಂ ಶುಂಠಿ ಸಾಕು. ಅದಕ್ಕಿಂತ ಹೆಚ್ಚು ಶುಂಠಿ ಸೇವನೆ ಮಾಡಿದ್ರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಹೆಚ್ಚು ಶುಂಠಿಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ. ಹೊಟ್ಟೆಯಲ್ಲಿ ಸಮಸ್ಯೆ ಕಾಡುತ್ತದೆ. ಹೆಚ್ಚು ಶುಂಠಿಯನ್ನು ಸೇವಿಸುವುದರಿಂದ ನಿದ್ರಾಹೀನತೆ ಕಾಡುತ್ತದೆ. ಆಮ್ಲೀಯ ಸಮಸ್ಯೆ ಕಾಡುತ್ತದೆ.
ಶುಂಠಿಯ ಸೇವನೆಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಸಕ್ಕರೆ ಮಟ್ಟವು ಸಾಮಾನ್ಯಕ್ಕಿಂತ ಕಡಿಮೆಯಿದ್ದರೆ, ಶುಂಠಿಯ ಅತಿಯಾದ ಸೇವನೆಯನ್ನು ತಪ್ಪಿಸಬೇಕು. ಶುಂಠಿಯನ್ನು ಅತಿಯಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಕುಸಿತ ಉಂಟಾಗುತ್ತದೆ.
ವೈದ್ಯರ ಪ್ರಕಾರ, ಗರ್ಭಿಣಿ ದಿನದಲ್ಲಿ 2.5 ಗ್ರಾಂ ಗಿಂತ ಹೆಚ್ಚು ಶುಂಠಿಯನ್ನು ಸೇವಿಸಬಾರದು. ಅಜೀರ್ಣ ಸಮಸ್ಯೆಗಳಿದ್ದರೆ ದಿನಕ್ಕೆ 1.2 ಗ್ರಾಂ ಗಿಂತ ಹೆಚ್ಚು ಶುಂಠಿಯನ್ನು ಸೇವಿಸಬಾರದು. ಮಹಿಳೆಯರು ತೂಕ ಇಳಿಸಿಕೊಳ್ಳಲು ಶುಂಠಿ ಸೇವಿಸುತ್ತಾರೆ. ಅಂತವರು ದಿನಕ್ಕೆ ಒಂದು ಗ್ರಾಂ ಶುಂಠಿಯನ್ನು ಮಾತ್ರ ಸೇವಿಸಬೇಕು.