ಚಳಿಗಾಲದಲ್ಲಿ ಚರ್ಮದ ತೇವಾಂಶ ಕಡಿಮೆಯಾಗುತ್ತದೆ. ಇದರಿಂದ ಸ್ಕಿನ್ ಡ್ರೈ ಆಗುತ್ತದೆ. ಚಳಿಗಾಲದಲ್ಲಿ ಮಹಿಳೆಯರು ಮಾತ್ರವಲ್ಲ ಪುರುಷರು ಕೂಡ ಚರ್ಮದ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಾದರೆ ಚಳಿಗಾಲದಲ್ಲಿ ಪುರುಷರು ಎದುರಿಸುವ ಚರ್ಮದ ಸಮಸ್ಯೆ ಮತ್ತು ಅದಕ್ಕೆ ಪರಿಹಾರ ಏನೆಂಬುದನ್ನು ತಿಳಿಯೋಣ.
ಚಳಿಗಾಲದಲ್ಲಿ ಪುರುಷರ ಸ್ಕಿನ್ ಕೂಡ ಡ್ರೈ ಆಗುತ್ತದೆ. ಆದಕಾರಣ ಅವರು ಮಾಯಿಶ್ಚರೈಸರ್ ಅಥವಾ ಎಣ್ಣೆಯನ್ನು ಹಚ್ಚಬೇಕು.
ಚಳಿಗಾಲದಲ್ಲಿ ಗಡ್ಡ ಮಾಡುವಾಗ ರೇಜರ್ ಮತ್ತು ಶೆವಿಂಗ್ ಕ್ರಿಂ ಬಳಸುವುದರಿಂದ ಚರ್ಮವು ಕಿತ್ತು ಬರುತ್ತದೆ. ಹಾಗಾಗಿ ಎಲೆಕ್ಟ್ರಿಕ್ ಟ್ರಿಮ್ಮರ್ ಬಳಸಿದರೆ ಉತ್ತಮ.
ಚಳಿಗಾಲದಲ್ಲಿ ಪುರುಷರ ತುಟಿಗಳು ಹೆಚ್ಚಾಗಿ ಒಡೆಯುತ್ತದೆ. ಆದಕಾರಣ ವಿಟಮಿನ್ ಇ, ಸಿ ಅಥವಾ ನೈಸರ್ಗಿಕ ಎಣ್ಣೆಯನ್ನು ಹಚ್ಚಿ.
ಮುಖದ ಚರ್ಮ ಒಣಗಿದಾಗ ಅಲ್ಲಿ ಮೊಡವೆಗಳು ಮೂಡುತ್ತವೆ. ಆದಕಾರಣ ದಿನಕ್ಕೆ 2 ಬಾರಿ ಮುಖವನ್ನು ವಾಶ್ ಮಾಡಿ. ಮಾಯಿಶ್ಚರೈಸರ್ ಕ್ರೀಂ ಹಚ್ಚಿ.
ಚಳಿಗಾಲದಲ್ಲಿ ಕೈಗಳು ಒಣಗುತ್ತವೆ. ಆಗ ಕೈಗಳನ್ನು ತೊಳೆಯುತ್ತಿದ್ದರೆ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಆದಕಾರಣ ಕೈಗೆ ಅಲೋವೆರಾ ಜೆಲ್ ಅಥವಾ ಮಾಯಿಶ್ಚರೈಸರ್ ಲೋಷನ್ ಹಚ್ಚಿ.