ಕಡಲೆ ಹಿಟ್ಟು ಕೇವಲ ತಿಂಡಿಗಳಿಗಷ್ಟೇ ಅಲ್ಲ, ಉತ್ತಮ ಸೌಂದರ್ಯ ವರ್ಧಕವಾಗಿ ಕೆಲಸ ಮಾಡುತ್ತದೆ ಎಂದು ಎಲ್ಲರಿಗೂ ತಿಳಿದಿದೆ.
ಫೇಸ್ ಪ್ಯಾಕ್ ಅಥವಾ ಫೇಸ್ ಮಾಸ್ಕ್ ಗಳಲ್ಲಿ ಕಡಲೆ ಹಿಟ್ಟಿನ ಬಳಕೆ ಅತಿ ಹೆಚ್ಚು. ಬೇರೆ ಸಮಯದಲ್ಲಿ ಚರ್ಮಕ್ಕೆ ಸದಾ ಸಹಕಾರಿಯಾಗಿರುವ ಕಡಲೆ ಹಿಟ್ಟು ಚಳಿಗಾಲದಲ್ಲಿ ವಿರುದ್ಧ ರೀತಿಯ ಪರಿಣಾಮ ಬೀರುತ್ತದೆ.
ಚರ್ಮದಲ್ಲಿರುವ ಎಣ್ಣೆಯಂಶವನ್ನು ಹೀರಿಕೊಂಡು ಚರ್ಮದ ತೇವಾಂಶವನ್ನು ಸಹ ಕಡಿಮೆ ಮಾಡುತ್ತದೆ. ಇದರಿಂದ ಚರ್ಮದಲ್ಲಿ ಒಡಕುಗಳು ಉಂಟಾಗುತ್ತವೆ. ಚಳಿಗಾಲದಲ್ಲಿ ನಮ್ಮ ಚರ್ಮಕ್ಕೆ ಎಷ್ಟು ಸಾಧ್ಯವೋ ಅಷ್ಟು ತೇವಾಂಶ ಮತ್ತು ಆರೈಕೆ ಅವಶ್ಯಕವಾಗಿರುತ್ತದೆ.
ಆದ್ದರಿಂದ ಕಡಲೆ ಹಿಟ್ಟನ್ನು ಚರ್ಮಕ್ಕೆ ತೇವಾಂಶ ಒದಗಿಸುವ ಆಹಾರಗಳಾದ ತಾಜಾ ಹಾಲಿನ ಕೆನೆ, ಹಾಲು ಮತ್ತು ಮೊಸರುಗಳ ಜೊತೆ ಉಪಯೋಗಿಸಿದರೆ ಚಳಿಗಾಲದಲ್ಲಿ ಚರ್ಮಕ್ಕೆ ಯಾವುದೇ ರೀತಿಯ ಹಾನಿ ಸಂಭವಿಸುವುದಿಲ್ಲ ಮತ್ತು ಚರ್ಮ ತನ್ನ ಕಾಂತಿಯನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.